ವಯೋವುತಿ ಹೆಚ್ಚಿಸಲು ಸುವರ್ಣ ಸೌಧ ಚಲೋ
ಧಾರವಾಡ: ಪಿಎಸ್‌ಐ ನೇಮಕಾತಿ ವಯೋವುತಿ ಹೆಚ್ಚಿಸುವಂತೆ ಆಗ್ರಹಿಸಿ ಪಿಎಸ್‌ಐ ವಯೋವುತಿ ಹೆಚ್ಚಿಸುವ ವಿದ್ಯಾರ್ಥಿಗಳ ಸಂಘ ನ. 25, 26, 27 ರಂದು ಬೆಳಗಾವಿ ಸುವರ್ಣ ಸೌಧ ಚಲೋ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದೆ. ರಾಜ್ಯ ಸರ್ಕಾರ ಕಳೆದ 2009 ಜುಲೈ ನಂತರದಿಂದ ಪಿಎಸ್‌ಐ ಹುದ್ದೆಗೆ ಅರ್ಜಿ ಆಹ್ವಾನಿಸಿಲ್ಲ. ಈ ಮಧ್ಯೆ ರಾಜ್ಯ ಸರ್ಕಾರ ನಿಗದಿಪಡಿಸಿದ ವಯೋವುತಿಯನ್ನು ಸಾಕಷ್ಟು ಯುವಕ, ಯುವತಿಯರು ದಾಟಿದ್ದು, ಪಿಎಸ್‌ಐ ಹುದ್ದೆ ನೇಮಕಾತಿಯಿಂದ ವಂಚಿತರಾಗಿದ್ದಾರೆ. ಸರ್ಕಾರ ಪಿಎಸ್‌ಐ ಹುದ್ದೆ ನೇಮಕಾತಿಗೆ ವಯೋವುತಿ ಹೆಚ್ಚಿಸುವ ಮೂಲಕ ಪದವೀಧರಿಗೆ ಅವಕಾಶ ಕಲ್ಪಿಸಬೇಕು. ಪಿಎಸ್‌ಐ ನೇಮಕಾತಿಗೆ ಸರ್ಕಾರ ನಿಗದಿಪಡಿಸಿದ 28 ವಯೋವುತಿಯನ್ನು 30ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಪಿಎಸ್‌ಐ ಹುದ್ದೆ ಆಕಾಂಕ್ಷಿಗಳು ಹೆಚ್ಚಿನ ಮಾಹಿತಿಗಾಗಿ ಮೊ. 9620301152 ಅಥವಾ 8147413323 ಸಂಪರ್ಕಿಸಬೇಕೆಂದು ಸಂಘದ ಮುಖ್ಯಸ್ಥ ಶಿವು ಗುಂಡಲೂರ ತಿಳಿಸಿದ್ದಾರೆ.