ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆತ್ಮವಿಶ್ವಾಸ ವಿಕಸನದಿಂದ ಉತ್ತಮ ಭವಿಷ್ಯ

Mainashree
Updated On : 26 Nov 2013, 10:46 am

ಹುಬ್ಬಳ್ಳಿ: ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಗುರುತಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸ ವಿಕಸನಗೊಳಿಸಿ ಅತ್ಯುತ್ತಮ ಭವಿಷ್ಯ ನಿರೂಪಿಸಿಕೊಳ್ಳಬೇಕೆಂದು ಕಾದಂಬರಿಕಾರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯಂಡಮೂರಿ ವೀರೇಂದ್ರನಾಥ್ ಸಲಹೆ ನೀಡಿದರು.
ನಗರದ ಕೆಎಲ್‌ಇ ಐಎಂಎಸ್‌ಆರ್ ಕಾಲೇಜಿನಲ್ಲಿ ಎಂಬಿಎ ವಿದ್ಯಾರ್ಥಿಗಳೊಂದಿಗೆ ಸೋಮವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ವಿದ್ಯಾರ್ಥಿಗಳು ಜ್ಞಾನವಂತರು. ಆದರೆ ಹಿಂಜರಿಕೆಯ ಕಾರಣ ಮುನ್ನುಗ್ಗುವಿಕೆಯ ಕೊರತೆ ಲಕ್ಷಣಗಳು ಕಾಣುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವ್ಯಕ್ತಿತ್ವವೆನ್ನುವುದು ಎರಡು ಬದಿ ಹೊಂದಿದ ಮುಖವಾಡ. ಒಂದು ಬಾಹ್ಯ, ಮತ್ತೊಂದು ಆಂತರಿಕ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜತೆಗೆ ಜ್ಞಾಪಕ ಶಕ್ತಿ, ಏಕಾಗ್ರತೆ, ಶಬ್ದ ಭಂಡಾರ, ಸಮಯ ಪ್ರಜ್ಞೆಗಳಂಥ ಮೃದು ಕೌಶಲ್ಯಗಳನ್ನೂ ಅಳವಡಿಸಿಕೊಂಡರೆ ಸಂದರ್ಶನಗಳಲ್ಲಿ ಯಶಸ್ವಿಯಾಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು ಎಂದು ತಿಳಿಸಿದರು.
ಐಎಂಎಸ್‌ಆರ್ ನಿರ್ದೇಶಕ ಡಾ. ಪಿ.ಬಿ. ರೂಡಗಿ ಸ್ವಾಗತಿಸಿದರು. ಡೀನ್ ಅಕ್ಯಾಡಿಮಿಕ್ ಪ್ರೊ. ಎನ್.ಎಸ್. ಧೋಪೇಶ್ವರ ಪರಿಚಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement