ಪ್ರತಿಭೆ ಅನಾವರಣಕ್ಕೆ ಕ್ಲಬ್ ಸಹಾಯಕ
ಧಾರವಾಡ: ಸುವರ್ಣ ಲೇಡೀಸ್ ಕ್ಲಬ್ ಸಂಘದ ಸದಸ್ಯತ್ವ ಪಡೆದವರಿಗೆ ಮತ್ತು ಅವರ ಕುಟುಂಬದವರಿಗೆ ಒಂದು ವೇದಿಕೆ ರೂಪಿಸಿ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಕ್ಲಬ್ ಸೂಕ್ತ ವೇದಿಕೆ ಕಲ್ಪಿಸುತ್ತಿದೆ ಎಂದು ಚೇತನಾ ಭಟ್ ಹೇಳಿದರು. ಸುವರ್ಣಾ ಲೇಡೀಸ್ ಕ್ಲಬ್ ವತಿಯಿಂದ ಮಹಿಳೆಯರಿಗಾಗಿ ಏರ್ಪಡಿಸಿದ್ದ ನೃತ್ಯ ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಕ್ಲಬ್ನಲ್ಲಿ ಹಮ್ಮಿಕೊಳ್ಳಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹಿಳೆಯರಿಗೆ ಮನೆಗೆಲಸದೊಂದಿಗೆ ಹವ್ಯಾಸ ನೀಡಿದಂತಾಗಿದೆ ಎಂದರು. ಕ್ಲಬ್ನ ಜಿಲ್ಲಾಧ್ಯಕ್ಷರಾದ ಶಶಿಕಲಾ ಹೆಬ್ಳೀಕರ ಮಾತನಾಡಿದರು. ಕಾರ್ಯದರ್ಶಿ ಹೇಮಾಕ್ಷಿ ಕಿರೇಸೂರ, ಸುನಂದಾ ನಿಂಬಣ್ಣವರ, ಖಜಾಂಚಿ ಲತಾ ಮಂಟಾ, ಅನಿತಾ, ಜಯಶ್ರೀ, ಆಶಾ, ನಿರ್ಮಲಾ ಸಾರಂಗಮಠ, ಮಂಜುಳಾ ಮಡಿವಾಳರ, ಲಕ್ಷ್ಮೀ ಹಳ್ಳಿಕೇರಿ ಮತ್ತಿತರು ಇದ್ದರು.