ಜೋಶಿ ಜನ್ಮದಿನ: ರೋಗಿಗಳಿಗೆ ಹಣ್ಣು ವಿತರಣೆ
ಧಾರವಾಡ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರ 51ನೇ ಜನ್ಮದಿನದ ಅಂಗವಾಗಿ ಬುಧವಾರ ಇಲ್ಲಿನ ಜಿಲ್ಲಾ ಆಸ್ಪತೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರ ಮತ್ತು ಧಾರವಾಡ-71 ವಿಧಾನಸಭಾ ಕ್ಷೇತ್ರಗಳ ಬಿಜೆಪಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಗೋಡಬೊಲೆ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸಿದರು. ಈರೇಶ ಅಂಚಟಗೇರಿ, ಕಲಂದರ ಮುಲ್ಲಾ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ, ಶಂಕರ ಶೇಳಕೆ, ಪೂರ್ಣಾ ಪಾಟೀಲ, ಟಿ.ಎಸ್. ಪಾಟೀಲ, ಲಲಿತ ಭಂಡಾರಿ, ಈರಣ್ಣ ಹಪ್ಪಳಿ, ಸುನೀಲ ಮೋರೆ, ಮೋಹನ ರಾಮದುರ್ಗ, ಗೀತಾ ನವಲೆ, ಬಸವರಾಜ ಬೆಣ್ಣಿ, ಪುಷ್ಪಾ ನವಲಗುಂದ ಇದ್ದರು.