ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಾಸಕ ಸಂಭಾಜಿ ಪಾಟೀಲ ಪ್ರತಿಕೃತಿ ದಹನ

Lingaraj Badiger
Updated On : 28 Nov 2013, 11:03 am

ಕಲಘಟಗಿ: ಕನ್ನಡ ನಾಡು, ನುಡಿ, ಭಾಷೆಗಳ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಬೆಳಗಾವಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ವಿರುದ್ಧ ಬುಧವಾರ ಮಧ್ಯಾಹ್ನ ತಾಲೂಕು ಕರವೇ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಶಾಸಕ ಸಂಭಾಜಿ ಪಾಟೀಲ ಅವರ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದರು. ಪ್ರತಿಭಟನೆ ಪರಿಣಾಮ ಸಾರಿಗೆ ಸಂಚಾರ ಸುಮಾರು ಗಂಟೆಗೂ ಅಧಿಕ ಕಾಲ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡವಂತಾಯಿತು. ಅಧ್ಯಕ್ಷ ಅನಿಲ ಪಮ್ಮಾರ ಕೆ.ಬಿ. ಗುಡಿಹಾಳ, ಮೈಲಾರಿ ಅಲಗೂರ, ಪ್ರಕಾಶ ಲಮಾಣಿ, ವಾಸು ಲಮಾಣಿ, ಅಶೋಕ ಲಮಾಣಿ, ಯಲ್ಲಪ್ಪ ಮೇಲಿನಮನಿ ಪಾಲ್ಗೊಂಡಿದ್ದರು. ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಮತದಾರರ ಪರಿಷ್ಕರಣೆ ಅವಧಿ ವಿಸ್ತರಣೆ
ಧಾರವಾಡ: ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ 2014ರ ಜ, 1ರ ವರೆಗೆ ಅರ್ಹತಾ 18 ವರ್ಷ ಪೂರ್ಣಗೊಳಿಸುವ, ಮತದಾರ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರ ಹೆಸರು ಸೇರ್ಪಡೆಗಾಗಿ, ಪಟ್ಟಿಯಲ್ಲಿನ ತಿದ್ದುಪಡಿಗಾಗಿ ಭಾರತ ಚುನಾವಣಾ ಆಯೋಗವು ಡಿ. 6ರ ವರೆಗೆ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement