ಅಕ್ರಮ ಹತ್ತಿ ಸಾಗಾಟ ನಿಷೇಧಕ್ಕೆ ಆಗ್ರಹ
ಹುಬ್ಬಳ್ಳಿ: ಅಕ್ರಮ ಹತ್ತಿ ಸಾಗಾಟ ನಿಯಂತ್ರಿಸುವಂತೆ ಆಗ್ರಹಿಸಿ ಕರ್ನಾಟಕ ಕಾಟನ್ ಅಸೋಸಿಯೇಶನ್ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಅರ್ಪಿಸಿದರು. ಬೆಳಗಾವಿಯ ಚಳಿಗಾಲ ಅಧಿವೇಶ ಸ್ಥಳಕ್ಕೆ ನಿಯೋಗದೊಂದಿಗೆ ತೆರಳಿದ ಅಸೋಸಿಯೇಶನ್ ಪದಾಧಿಕಾರಿಗಳು, ಗುಲ್ಬರ್ಗ, ಮೈಸೂರು ಹಾಗೂ ಗಡಿ ಪ್ರದೇಶಗಳ ಮೂಲಕ ಪರರಾಜ್ಯಗಳಿಗೆ ಅಕ್ರಮವಾಗಿ ಹತ್ತಿ ಸಾಗಿಸಲಾಗುತ್ತಿದ್ದು ತಕ್ಷಣ ಇದನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ ಮನವಿಯನ್ನು ಸಿಎಂ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅವರನ್ನು ಅರ್ಪಿಸಲಾಯಿತು. ಮನವಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಹತ್ತಿ ಅಕ್ರಮ ಸಾಗಾಟ ತಡೆಯುವಂತೆ ಸೂಚನೆ ನೀಡಿದ್ದಾರೆ ಎಂದೂ ಅಸೋಸಿಯೇಶನ್ ಪ್ರಕಟಣೆ ತಿಳಿಸಿದೆ. ನಿಯೋಗದಲ್ಲಿ ಸಂಸ್ಥೆ ಅಧ್ಯಕ್ಷ ಎಸ್.ಬಿ. ಅನ್ನೆಪ್ಪನವರ, ಶಿವಶಂಕಪ್ಪ ಮೂಗಬಸ್ತ್, ಎಂ.ಎಸ್. ಸುಲ್ತಾನಪುರಿ ಇದ್ದರು.