ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ಕೆಡಿಪಿ ಸಭೆ

Lingaraj Badiger
Updated On : 30 Nov 2013, 11:04 am

ಧಾರವಾಡ: ಧಾರವಾಡ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನ. 30 ರಂದು ಬೆಳಗ್ಗೆ 11ಕ್ಕೆ ತ್ರೈಮಾಸಿಕ (ಕೆಡಿಪಿ) ಕರ್ನಾಟಕ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಲಿದೆ. ಸಭೆಯ ಅಧ್ಯಕ್ಷತೆಯನ್ನು ಶಾಸಕ ವಿನಯ ಕುಲಕರ್ಣಿ ವಹಿಸುವರು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ವಕೀಲರ ಸಂಘದ ಚುನಾವಣೆ
ಹುಬ್ಬಳ್ಳಿ: ಇಲ್ಲಿನ ವಕೀಲರ ಸಂಘದ 2013ನೇ ಸಾಲಿನ ಚುನಾವಣೆ ಡಿ. 21ರಂದು ನಡೆಯಲಿದ್ದು, ಸ್ಪರ್ಧಾಕಣಕ್ಕಿಳಿಯಲು ವಕೀಲರಲ್ಲಿ ತೀವ್ರ ಪೈಪೋಟಿ ನಡೆದಿದೆ. ಸಂಘದ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿವೆ. ಬುಧವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಡಿ. 4ರ ಸಂಜೆ 5 ಗಂಟೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನ. ಡಿ. 5ರಂದು ನಾಮಪತ್ರ ಪರಿಶೀಲನೆ ಹಾಗೂ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ನಾಮಪತ್ರ ಹಿಂಪಡೆಯಲು ಡಿ. 11 ಕೊನೆಯ ದಿನ. ಡಿ. 12ರಂದು ಸ್ಪರ್ಧಾ ಕಣದಲ್ಲುಳಿದವರ ಹೆಸರು ಪ್ರಕಟವಾಗಲಿದೆ. ಡಿ. 21ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಮತದಾನ ನಡೆಯಲಿದ್ದು, ಅಂದೇ ಸಂಜೆ ಮತ ಎಣಿಕೆ ಕೂಡ ನಡೆಯಲಿದೆ ಎಂದು ಚುನಾವಣಾಧಿಕಾರಿ ಎಸ್. ವೈ. ದುಂಡರಡ್ಡಿ ತಿಳಿಸಿದ್ದಾರೆ.
ಸಿಂಡಿಕೇಟ್ ಸದಸ್ಯರಿಗೆ ಸನ್ಮಾನ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ಲಕ್ಷ್ಮಣ ಬೀರಗೌಡರ, ಶಂಕರಗೌಡ ಪಾಟೀಲ ಅವರನ್ನು ಜಯಕರ್ನಾಟಕ ಸಂಘಟನೆ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಸುಧೀರ ಮುಧೋಳ ಮಾತನಾಡಿ, ಕನ್ನಡ ನಾಡು ನುಡಿ, ನೆಲ ಜಲದ ಸೇವೆಗೈದ ಸಾಧಕರನ್ನು ಸಂಘಟನೆ ಗುರುತಿಸಿ ಗೌರವಿಸುತ್ತಿದೆ ಎಂದರು. ಉಪಾಧ್ಯಕ್ಷ ಚಂದ್ರು ಅಂಗಡಿ, ಅಲ್ತಾಪ ಜಾಲೆಗಾರ, ಕರಿಯಪ್ಪ ಮಾಳಗಿಮನಿ, ಪರಶುರಾಮ ದೊಡಮನಿ, ಇಮ್ತಿಯಾಜ ಬಾಳೆಕುಂದ್ರಿ, ಚೆನ್ನು ತೋಟದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement