ವಿಶ್ವ ಏಡ್ಸ್ ದಿನಾಚರಣೆ
ಧಾರವಾಡ: ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಡಿ. 1ರಂದು ಬೆಳಗ್ಗೆ 8.30ಕ್ಕೆ ಜಾಗೃತಿ ಜಾಥಾ ಸಮಾರಂಭ ಜರುಗಲಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಆಹಾರ ಮಳಿಗೆಗೆ ಅರ್ಜಿ
ಧಾರವಾಡ: ಧಾರವಾಡ ಉತ್ಸವ ಸಂದರ್ಭದಲ್ಲಿ ಡಿ. 13, 14, 15ರಂದು ವಿವಿಧ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮ ವೇದಿಕೆಗಳ ಬಳಿ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಆಹಾರ ತಯಾರಿಕೆ ಸೇವಾ ಸಂಘ, ಸಂಸ್ಥೆಗಳು, ಜನರು ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಧಾರವಾಡ ಇವರಿಂದ ಅರ್ಜಿ ಪಡೆದು ಡಿ. 7 ರೊಳಗೆ ಸಲ್ಲಿಸಲು ತಿಳಿಸಲಾಗಿದೆ. ಮಾಹಿತಿಗೆ ದೂ.ಸಂ. 0836-2444594 ಸಂಪರ್ಕಿಸಬಹುದು.