ವೈಷ್ಣವ ದೀಕ್ಷೆಗೆ ನೂರಾರು ಪತ್ರ ಬರ್ತಿವೆ
ಹುಬ್ಬಳ್ಳಿ: ನಾನಾಗಿ ವೈಷ್ಣವ ದೀಕ್ಷೆ ಕೊಡುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಇಂದಿಗೂ ವೈಷ್ಣವ ದೀಕ್ಷೆ ಕೊಡಿ ಎನ್ನುವ ನೂರಾರು ಪತ್ರಗಳು ತಮಗೆ ಬರುತ್ತಿವೆ. ಇದು ಸ್ವಯಂ ಪ್ರೇರಿತವಾಗಿ ಬರುತ್ತಿರುವ ಪತ್ರಗಳು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶುಕ್ರವಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಭಕ್ತ ಕನಕದಾಸರೂ ತಾವಾಗಿಯೇ ವೈಷ್ಣವ ದೀಕ್ಷೆ ಪಡೆದಿದ್ದರು. ತಮಗೂ ವೈಷ್ಣವ ದೀಕ್ಷೆ ಕೊಡಿ ಎಂದು ಕುರುಬರು ಹೇಳಿಕೊಂಡು ಬಂದರು. ಹೀಗಾಗಿ ನಾನು ದೀಕ್ಷೆ ಕೊಡಲು ಮುಂದಾದೇ ವಿನಃ, ನಾನಾಗಿಯೇ ದೀಕ್ಷೆ ಕೊಡಲು ಮುಂದೆ ಬಂದಿಲ್ಲ, ಆಹ್ವಾನವೂ ನೀಡಿಲ್ಲ. ಕೆಲವರು ಇದನ್ನೇ ತಿರುಚುವ ಕೆಲಸ ಮಾಡಿದರು. ಈ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ ಎಂದರು.
ಶಾದಿ ಭಾಗ್ಯ ಯೋಜನೆ ದೀನ-ದಲೀತರು ಸೇರಿದಂತೆ ಎಲ್ಲ ಬಡವರಿಗೆ ಅನ್ವಯವಾಗಬೇಕು. ಇದನ್ನು ಒಂದೇ ಸಮಾಜಕ್ಕೆ ಮೀಸಲಾಗಿಸುವುದು ಸರಿಯಲ್ಲ ಎಂದು ಶ್ರೀಗಳು, ಕಂಚಿ ಶ್ರೀ ಮತ್ತವರ ಭಕ್ತರನ್ನು ಆರೋಪ ಮುಕ್ತವೆಂದು ನ್ಯಾಯಾಲಯ ತೀರ್ಪು ನೀಡಿರುವುದು ಸ್ವಾಗತಾರ್ಹ ಎಂದರು.