ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಘನತ್ಯಾಜ್ಯ ವಿಲೇವಾರಿಗೆ ರು. 1.36 ಕೋಟಿ ವೆಚ್ಚ

Vishwanath S
Updated On : 1 Dec 2013, 12:21 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 30
ಘನತ್ಯಾಜ್ಯ ವಿಲೇವಾರಿಗೆ ಮಹಾನಗರ ಪಾಲಿಕೆ ಐದು ವರ್ಷಗಳ ಅವಧಿಯಲ್ಲಿ ಒಟ್ಟು ರು. 1.36 ಕೋಟಿ ವ್ಯಯಿಸಿದೆ ಎಂದು ಆಯುಕ್ತ ರಮಣದೀಪ ಚೌಧರಿ ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಪೈಕಿ ಪಾಲಿಕೆ ಕಾಯಂ ಪೌರ ಕಾರ್ಮಿಕರಿಗೆ 2008-09ನೇ ಸಾಲಿನಲ್ಲಿ ವೇತನ ಮತ್ತು ಭತ್ಯೆಗೆ ರು. 1271.04 ಲಕ್ಷ, 2009-10ರಲ್ಲಿ ರು. 1311.93 ಲಕ್ಷ, 2010-11ರಲ್ಲಿ ರು. 1434.04 ಲಕ್ಷ, 2011-12ರಲ್ಲಿ ರು. 1831.08 ಲಕ್ಷ ಹಾಗೂ 2012-13ನೇ ಸಾಲಿನಲ್ಲಿ ರು. 1849.66 ಲಕ್ಷ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪಾಲಿಕೆಯಿಂದ ಗುತ್ತಿಗೆದಾರರ ಮೂಲಕ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ವೇತನ ಮತ್ತು ಭತ್ಯೆಗೆ 2008-09ನೇ ಸಾಲಿನಲ್ಲಿ ರು. 681.75 ಲಕ್ಷ, 2009-10ರಲ್ಲಿ ರು. 744.53 ಲಕ್ಷ, 2010-11ರಲ್ಲಿ ರು. 1166.78 ಲಕ್ಷ, 2011-12ರಲ್ಲಿ ರು. 1149.67 ಲಕ್ಷ ಹಾಗೂ 2012-13 ನೇ ಸಾಲಿನಲ್ಲಿ ರು. 1060.73 ಲಕ್ಷ ವ್ಯಯಿಸಲಾಗಿದೆ.
ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ವೇತನ ಭತ್ಯೆಗೆ 2008-09ನೇ ಸಾಲಿನಲ್ಲಿ ರು. 8.37 ಲಕ್ಷ, 2009-10ರಲ್ಲಿ ರು. 8.40 ಲಕ್ಷ, 2010-11ರಲ್ಲಿ ರು. 14.01 ಲಕ್ಷ, 2011-12ರಲ್ಲಿ ರು. 14.06 ಲಕ್ಷ ಹಾಗೂ 2012-13ನೇ ಸಾಲಿನಲ್ಲಿ ರು. 5.06 ಲಕ್ಷ ವೆಚ್ಚ ಮಾಡಲಾಗಿದೆ.
ವಿವಿಧ ಯಂತ್ರೋಪಕರಣಗಳು ಹಾಗೂ ಟ್ರ್ಯಾಕ್ಟರ್ ವೆಚ್ಚಕ್ಕಾಗಿ 2008-09ನೇ ಸಾಲಿನಲ್ಲಿ ರು. 71.68 ಲಕ್ಷ, 2009-10ರಲ್ಲಿ ರು. 139.01 ಲಕ್ಷ, 2010-11ರಲ್ಲಿ ರು. 160.77 ಲಕ್ಷ, 2011-12ರಲ್ಲಿ ರು. 158.53 ಲಕ್ಷ ಹಾಗೂ  2012-13ನೇ ಸಾಲಿನಲ್ಲಿ ರು. 139.30 ಲಕ್ಷ ವೆಚ್ಚ ಮಾಡಲಾಗಿದೆ. ವಿವಿಧ ಸಲಕರಣೆ ಮತ್ತು ವಾಹನ ಬಾಡಿಗೆಗಾಗಿ 2008-09ನೇ ಸಾಲಿನಲ್ಲಿ ರು. 11.87 ಲಕ್ಷ, 2009-10ರಲ್ಲಿ ರು. 13.89 ಲಕ್ಷ, 2010-11ರಲ್ಲಿ ರು. 18.61 ಲಕ್ಷ, 2011-12ರಲ್ಲಿ ರು. 23.60 ಲಕ್ಷ ಹಾಗೂ 2012-13ನೇ ಸಾಲಿನಲ್ಲಿ ರು. 17.68 ಲಕ್ಷ ವೆಚ್ಚ ಮಾಡಲಾಗಿದೆ.
ಜಾಹೀರಾತು ಮತ್ತು ಪ್ರಚಾರ ವೆಚ್ಚಕ್ಕಾಗಿ 2008-09ನೇ ಸಾಲಿನಲ್ಲಿ ರು. 3.80 ಲಕ್ಷ, 2009-10ರಲ್ಲಿ ರು. 2.78 ಲಕ್ಷ, 2010-11ರಲ್ಲಿ ರು. 2.24 ಲಕ್ಷ, 2011-12ರಲ್ಲಿ ರು. 2.11 ಲಕ್ಷ ಹಾಗೂ 2012-13ನೇ ಸಾಲಿನಲ್ಲಿ ರು. 11.06 ಲಕ್ಷ ವೆಚ್ಚ ಮಾಡಲಾಗಿದೆ.
ಇತರೆ ಚಾಲನಾ ವೆಚ್ಚ ಅಂದರೆ ವಾಹನಗಳ ವಿಮೆ ಮೊತ್ತ, ತೆರಿಗೆ ಹಾಗೂ ಇತರ ವೆಚ್ಚ ಸೇರಿದಂತೆ 2008-09ನೇ ಸಾಲಿನಲ್ಲಿ ರು. 46.16 ಲಕ್ಷ, 2009-10 ರಲ್ಲಿ ರು. 49.72 ಲಕ್ಷ, 2010-11ರಲ್ಲಿ ರು. 68.22 ಲಕ್ಷ, 2011-12ರಲ್ಲಿ ರು.  61.44 ಲಕ್ಷ ಹಾಗೂ 2012-13ನೇ ಸಾಲಿನಲ್ಲಿ ರು. 70.89 ಲಕ್ಷ ವೆಚ್ಚ ಮಾಡಲಾಗಿದೆ.
ಈ ಅವಧಿಯಲ್ಲಿ ಮಾಡಲಾದ ವೆಚ್ಚವು ಪಾಲಿಕೆಯ ಸಾಮಾನ್ಯ ಸಭೆಯ ಅನುಮೋದನೆ ಮತ್ತು ಸರ್ಕಾರದ ಘನತ್ಯಾಜ್ಯ ವಿಲೇವಾರಿ ನಿಯಮಾವಳಿಯ ಅಡಿಯಂತೆ ನಿಯಮಾನುಸಾರ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆದು 2008-09ರಿಂದ 2012-13ರ ವರೆಗೆ ರು. 136 ಕೋಟಿ ವ್ಯಯಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪಾಲಿಕೆಯಿಂದ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಪಡೆದು ಸಾರ್ವಜನಿಕರಿಗೆ ತಪ್ಪು ಅರ್ಥ ಬರುವಂತೆ ಸ್ಥಳೀಯ ಪತ್ರಿಕೆಗಳ ಮೂಲಕ ಗಮನ ಸೆಳೆಯುತ್ತಿರುವುದರಿಂದ ಸಾರ್ವಜನಿಕರಿಗೆ ಪಾರದರ್ಶಕವಾಗಿ ಮಾಹಿತಿ ಲಭ್ಯವಾಗಬೇಕೆಂಬ ಉದ್ದೇಶದಿಂದ ಈ ಮಾಹಿತಿಯನ್ನು ಪ್ರಕಟಿಸಲಾಗಿದೆ ಎಂದೂ ಆಯುಕ್ತರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement