ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಲಾರಿ ಮಾಲೀಕರಿಂದ ಮುಷ್ಕರ

Vishwanath S
Updated On : 4 Oct 2013, 10:55 am

ನವಲಗುಂದ: ಸರ್ಕಾರದಿಂದ ಮರಳು ಸಾಗಾಣಿಕೆ ಬಗ್ಗೆ ಸ್ಪಷ್ಟ ನೀತಿ ಇಲ್ಲದ್ದರಿಂದ ಒಂದೊಂದು ಜಿಲ್ಲೆಗೆ ಒಂದೊಂದು ರೀತಿ ನಿಲುವನ್ನು ಆಯಾ ಜಿಲ್ಲಾಧಿಕಾರಿಗಳು ಅನುಸರಿಸುತ್ತಿದ್ದಾರೆ. ಧಾರವಾಡ ಜಿಲ್ಲೆಗೆ ಕಾನೂನಾತ್ಮಕವಾಗಿ ಸಕ್ರಮ ಮರಳು ಸಿಗುವ ವ್ಯವಸ್ಥೆ ಆಗುವವರೆಗೆ ಅನಿರ್ದಿಷ್ಟ ಕಾಲ ಮುಷ್ಕರ ಆರಂಭಿಸಿರುವುದಾಗಿ ಇಲ್ಲಿಯ ಅಜಾತ ನಾಗಲಿಂಗೇಶ್ವರ ಲಾರಿ ಮಾಲೀಕರ ಸಂಘದಿಂದ ತಹಸೀಲ್ದಾರ್ ನವೀನ ಹುಲ್ಲೂರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಹುಬ್ಬಳ್ಳಿ-ಧಾರವಾಡ ತುಂಗಭದ್ರಾ ಮರಳು ಸಾಗಾಣಿಕೆದಾರರ ಸಂಘ ನೀಡಿದ್ದ ಅಕ್ರಮ ಮರಳು ಸರಬರಾಜಿಗೆ ನಿರ್ಬಂಧದ ಕರೆಗೆ ನಾವು ಬೆಂಬಲಿಸಿ ಗುರುವಾರದಿಂದ ಲಾರಿ ಮುಷ್ಕರ ಆರಂಭಿಸಲಾಗಿದೆ. ಮುಷ್ಕರ ಕಾಲಕ್ಕೆ ವಿರೋಧಿಸುವವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷ ಆರ್.ಜಿ. ಹೆಬಸೂರ, ಆರ್.ಎಚ್. ಜಾಲಿಹಾಳ, ರಾಜು ಹಿರಗಣ್ಣವರ, ಮೆಹಬೂಬಸಾಬ ಹುಗ್ಗಿ, ಭೀರಪ್ಪ ಕೊಳಲಿನ ಮೊದಲಾದವರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement