ಶ್ವಾನ ಪಲ್ಲಕ್ಕಿ ಉತ್ಸವ ಮಾಡಲಿ: ರಂಭಾಪುರಿ ಶ್ರೀ
ಹುಬ್ಬಳ್ಳಿ: ಶ್ವಾನ ಪಲ್ಲಕ್ಕಿ ಉತ್ಸವ ನಡೆಸುವುದಾದರೆ ನಡೆಸಲಿ. ತಾವು ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೂ ಸ್ವಾತಂತ್ರ್ಯವಿದೆ. ಶ್ವಾನ ಪಲ್ಲಕ್ಕಿ ಉತ್ಸವವಾದರೂ ಮಾಡಲಿ ಇನ್ನೇನಾದರೂ ಮಾಡಲಿ ಅದು ಅವರಿಗೆ ಬಿಟ್ಟ ವಿಚಾರ ಎಂದು ರಂಭಾಪುರಿ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ತಿರುಗೇಟು ನೀಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಅಡ್ಡಪಲ್ಲಕ್ಕಿ ಉತ್ಸವ ನಡೆದುಕೊಂಡು ಬಂದಿದೆ. ಇದು ಹೊಸ ಸಂಪ್ರದಾಯವೇನಲ್ಲ. ಯಾರೋ ಏನೋ ಹೇಳಿದರು ಎಂದ ಮಾತ್ರ ಉತ್ಸವ ನಿಲ್ಲಿಸಲಾಗುವುದಿಲ್ಲ, ಉತ್ಸವ ನಡೆದೇ ನಡೆಯುತ್ತದೆ ಎಂದರು.
ವೀರಶೈವ ಧರ್ಮದಲ್ಲಿ ಭಕ್ತರು ಗುರುವಿಗೆ ಮಹತ್ವ ಸ್ಥಾನವನ್ನು ನೀಡಿದ್ದಾರೆ. ಗುರುವನ್ನು ಹೊತ್ತುಕೊಂಡು ಹೋಗಬೇಕೆನ್ನುವುದು ಭಕ್ತರ ಆಶಯವೇ ಹೊರತು ತಮ್ಮ ಆಶಯವಲ್ಲ. ತಾವೇ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಹೋಗುವಂತೆ ಆಜ್ಞೆ ಮಾಡಿದ್ದೇ ಆದರೆ ಅದು ಮಾನವ ಹಕ್ಕು ಉಲ್ಲಂಘನೆ ಎಂದೆನ್ನಬಹುದು. ಭಕ್ತರೇ ಪ್ರೀತಿಯಿಂದ ಅಡ್ಡಪಲ್ಲಕ್ಕಿ ಉತ್ಸವ ನಡೆಸುವುದಾದರೆ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಹೇಳಿ ವಿವಾದ ಮಾಡ ಹೊರಟಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ ಧರ್ಮಕ್ಕೆ ಚ್ಯುತಿ ತರಲು ಕೆಲ ದುಷ್ಟಶಕ್ತಿಗಳು ಇಂಥಹ ಹೀನ ಕೃತ್ಯಕ್ಕೆ ಕೈಹಾಕಿವೆ. ಧರ್ಮ-ಧರ್ಮಗಳ ನಡುವೆ ಜಗಳ ತಂದಿಕ್ಕುವ ಕೆಟ್ಟ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ಹಿಂದಿನಿಂದ ಚಾಲ್ತಿಯಲ್ಲಿರುವ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಸಹಕಾರ ಕೊಡುವುದರಿಂದ ಎಲ್ಲವೂ ಉತ್ತಮವಾಗಲಿದೆ ಎಂದು ಶ್ರೀಗಳು ಹೇಳಿದರು.
ವೀರಶೈವ ಧರ್ಮದಲ್ಲಿ ಭಕ್ತರು ಗುರುವಿಗೆ ಮಹ್ವತ ಸ್ಥಾನ ನೀಡಿದ್ದಾರೆ. ಗುರುವನ್ನು ಹೊತ್ತುಕೊಂಡು ಹೋಗಬೇಕೆನ್ನುವುದು ಭಕ್ತರ ಆಶಯವೇ ಹೊರತು ತಮ್ಮ ಆಶಯವಲ್ಲ. ತಾವೇ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಹೋಗುವಂತೆ ಆಜ್ಞೆ ಮಾಡಿದ್ದೇ ಆದರೆ ಅದು ಮಾನವ ಹಕ್ಕು ಉಲ್ಲಂಘನೆ ಎಂದೆನ್ನಬಹುದು. ಭಕ್ತರೇ ಪ್ರೀತಿಯಿಂದ ಅಡ್ಡಪಲ್ಲಕ್ಕಿ ಉತ್ಸವ ನಡೆಸುವುದಾದರೆ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಹೇಳಿ ವಿವಾದ ಮಾಡ ಹೊರಟಿದ್ದು ಸರಿಯಲ್ಲ.