ಸಚಿವ ಶಿಂದೆ ರಾಜಿನಾಮೆಗೆ ಒತ್ತಾಯ
ಧಾರವಾಡ: ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂದೆ ಹೇಳಿಕೆ ಖಂಡಿಸಿ ಇಲ್ಲಿನ ಬಿಜೆಪಿ ಯುವ ಮೋರ್ಚಾ ಘಟಕ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.
ಸಚಿವ ಸುಶೀಲಕುಮಾರ ಶಿಂದೆ ಒಂದು ಸಮೂಹದ ಜನರನ್ನು ಓಲೈಸುವ ನಿಟ್ಟಿನಲ್ಲಿ ಕೋಮುವಾದಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಂದೆ ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಿರುವುದು ವಿಷಾದನೀಯ.
ಮತ ಬ್ಯಾಂಕ್ ರಾಜಕಾರಣ ಮಾಡುವ ನಿಟ್ಟಿನಲ್ಲಿ ರಾಷ್ಟ್ರವನ್ನು ಒಡೆದು ಆಳುವ ನೀತಿ ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಶಿಂಧೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಸುಶೀಲಕುಮಾರ್ ಅವರ ಪ್ರತಿಕೃತಿ ದಹಿಸುವ ಮೂಲಕ ಒತ್ತಾಯಿಸಿದರು. ಬಿಜೆಪಿ ಮುಖಂಡರಾದ ನಾಗರಾಜ ನಾಯಕ, ನಾಗರಾಜ ಹುಣಸಿಕಟ್ಟಿ, ಮಲ್ಲನಗೌಡ ಪಾಟೀಲ, ಅರವಿಂದ ಆಲದಕಟ್ಟಿ, ಸುರೇಶ ಬುದಪ್ಪನವರ, ಮೋಹನ ರಾಮದುರ್ಗ, ನಾಗರಾಜ ನಾಯಕ, ವಿವೇಕ ಅಸುಂಡಿ, ಶಿವಣ್ಣ ಬಡವಣ್ಣವರ, ಬಸವರಾಜ ಮುತ್ತಳ್ಳಿ, ಪ್ರಕಾಶ ಘೋಡಬೋಲೆ, ಸುರೇಶ ಬೇದರೆ, ಉದಯ ಲಾಡ್, ಈಶ್ವರ ಶಿವಳ್ಳಿ, ಸುನೀಲ ಮೋರೆ, ಸಂತೋಷ ನಾಗಮ್ಮನವರ, ಸುನೀಲ ಸಂಡೂರ, ಬಲರಾಮ ಕುಸುಗಲ್, ಅರ್ಜುನ ಕಟ್ಟಿಮನಿ, ಬಸವರಾಜ ಗರಗ, ಸಂತೋಷ ಸವಣೂರ, ಶಿವು ಹಲಗಿ, ರುದ್ರೇಶ ಹಿರೇಮಠ, ರಾಜು ಬಾರಾಟಕೆ, ಭೀಮು ಸವಣೂರ, ಸುಜಾತಾ ಕಳ್ಳಿಮನಿ ಹಾಗೂ ರಾಜೇಶ್ವರಿ ಕೊಂಗಿ ಇದ್ದರು.