ಇಂದು ಗ್ರಂಥಗಳ ಬಿಡುಗಡೆ
ಧಾರವಾಡ: ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಅ. 5ರಂದು ಸಂಜೆ 5.30ಕ್ಕೆ ಐದು ಗ್ರಂಥಗಳ ಬಿಡುಗಡೆ (ಗೃಹಪ್ರವೇಶ, ವಿಸರ್ಜನ ಮತ್ತು ಇತರ ನಾಟಕಗಳು, ಕಾಲಚಕ್ರ, ಅಂಗೈ ತುಂಬ ಬಯಲು ಹಾಗೂ ಕನ್ನಡದ ಕೈಗನ್ನಡಿ) ಸಮಾರಂಭ ನಡೆಯಲಿದೆ. ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜು ಅಧ್ಯಕ್ಷತೆ ವಹಿಸುವರು. ಡಾ. ಶಶಿಧರ ನರೇಂದ್ರ, ಡಾ. ಶರಣಮ್ಮ ಗೋರೆಬಾಳ, ಪ್ರೊ. ಶ್ರೀನಿವಾಸ ಸುತ್ರಾವೆ, ಡಾ. ವೈ.ಎಂ. ಭಜಂತ್ರಿ ಭಾಗಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ
ಕುಂದಗೋಳ: ಗುಡಗೇರಿ ಗ್ರಾಮದ ಸ್ಟೇಶನ್ ರಸ್ತೆ ಬಳಿ ಇರುವ ಶ್ರೀ ಪಾರ್ಶನಾಥ ತೀರ್ಥಂಕರ ಹಾಗೂ ಪದ್ಮಾವತಿ ಅಮ್ಮವರ ಬಸದಿಯಲ್ಲಿ ಇದೇ 5ರಿಂದ 14ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ನಿತ್ಯ ಬೆಳಗ್ಗೆ ತೀರ್ಥಂಕರಿಗೆ ಪಂಚಾಮೃತಾಭಿಷೇಕ, ಪದ್ಮಾವತಿ ಅಮ್ಮವರಿಗೆ ವಿಷೇಶ ಪೂಜೆ ಹಾಗೂ ಅಲಂಕಾರ ಪೂಜೆ ನೆರವೇರುವುದು. ಸಂಜೆ ಬಸದಿಯ ಆವರಣದಲ್ಲಿ ಪದ್ಮಾವತಿ ಅಮ್ಮವರಿಗೆ ಕುಂಕುಮಾರ್ಚನೆ ನೆರವೇರುವುದು. ನಂತರ ಪಲ್ಲಕ್ಕಿ ಉತ್ಸವ ಜರುಗುವುದು ಎಂದು ಬಸದಿಯ ವ್ಯವಸ್ಥಾಪಕ ಯಶೋಧರ ಡಿ. ಜೈನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಪದವೀಧರರ ಸಭೆ
ಕಲಘಟಗಿ: 2014ನೇ ಇಸವಿ ಜೂನ್ ತಿಂಗಳಲ್ಲಿ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಮತದಾರರ ನೋಂದಣಿ ಕಾರ್ಯ ಈಗಾಗಲೇ ಆರಂಭಗೊಂಡಿದೆ. ತಾಲೂಕಿನ ಎಲ್ಲ ಪದವೀಧರರು ಮತದಾರರ ಪಟ್ಟಿಯಲ್ಲಿ ಸೇರಿಸುವ ಸಲುವಾಗಿ ಅ. 5ರಂದು ಮಧ್ಯಾಹ್ನ 2ಕ್ಕೆ ಕಲಘಟಗಿಯ ಹನ್ನೆರಡು ಮಠದ ಆವರಣದಲ್ಲಿ ಸಭೆ ಕರೆಯಲಾಗಿದೆ. ಕಲಘಟಗಿಯ ಗುಡ್ ನ್ಯೂಸ್ ಪದವಿ ಮಹಾವಿದ್ಯಾಲಯದ ಗ್ರಂಥಪಾಲಕರಾದ ಡಾ ಮಹೇಶ ಡಿ. ಹೊರಕೇರಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದು, ಈ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎನ್.ವೈ. ಹುದ್ದಾರ ಅಧ್ಯಕ್ಷತೆ ವಹಿಸಲಿದ್ದು, ಸಭೆಗೆ ತಾಲೂಕಿನ ಪ್ರಾಥಮಿಕ ಶಾಲಾ ಹಂತದಿಂದ ಪದವಿ ಹಂತದ ವರೆಗಿನ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಕೀಲರು, ವೈದ್ಯರು, ಅಭಿಯಂತರು ಹಾಗೂ ಇತರೆ ಎಲ್ಲ ಪದವೀಧರರು ಆಗಮಿಸಬೇಕು ಎಂದು ಬಸವರಾಜ ಕುರಹಟ್ಟಿ ಮನವಿ ಮಾಡಿದ್ದಾರೆ.
ಹಿರೇಹೊನ್ನಿಹಳ್ಳಿ: ಗಾಂಧಿ ಜಯಂತಿ ಆಚರಣೆ
ಕಲಘಟಗಿ: ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಹಾಗೂ ಡಾ ರಾಜಕುಮಾರ ಕನ್ನಡ ಸಂಸ್ಕೃತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಕರಾವೇ ಅಧ್ಯಕ್ಷ ಬಿ.ವಿ. ಗಬ್ಬೂರ, ಮಹೇಶ ಸಿದ್ದಿರಣ್ಣವರ, ರವಿ ಪ್ರ. ಬಡಿಗೇರ, ಬಸವರಾಜ ಪುರದನ್ನವರ, ಪ್ರಭುರಂಗಾಪುರ, ರಫಿಕ್ ಜಾಫರಬಾಯಿ, ಈರಪ್ಪ ಧನಿಗೊಂಡ,ಬಸವರಾಜ ದೆಸೂರ, ಸುನಿಲ ಮನಗುಂಡಿ, ಶಂಕರಲಿಂಗ ಕೆಲಗೇರಿ ಮುಂತಾದವರು ಉಪಸ್ಥಿತರಿದ್ದರು.