ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ದಸರಾ ಮಹೋತ್ಸವ: ನಾಳೆಯಿಂದ ವಿವಿಧ ಕಾರ್ಯಕ್ರಮ

Vishwanath S
Updated On : 5 Oct 2013, 11:38 am

ಹುಬ್ಬಳ್ಳಿ: ಜಗದ್ಗುರು ಬೃಹನ್ ಹೊಸಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅ. 6ರಿಂದ 14ರ ವರೆಗೆ ನಗರದಲ್ಲಿ 'ಉತ್ತರ ಕರ್ನಾಟಕದ ಹುಬ್ಬಳ್ಳಿ ದಸರಾ ಮಹೋತ್ಸವ-2013' ಕಾರ್ಯಕ್ರಮ ಆಯೋಜಿಸಲಾಗಿದೆ.
ಜಗದ್ಗುರು ಪೀಠ ಹೊಸಮಠದ ವಿಶ್ವಶಾಂತಿ ಜಾಗೃತಿ ಮಂಟಪದಲ್ಲಿ ಪ್ರತಿದಿನ ಸಂಜೆ 5.30ರಿಂದ ರಾತ್ರಿ 8.30ರ ವರೆಗೆ ವಿಚಾರಗೋಷ್ಠಿ, ವಿವಿಧ ಸ್ಪರ್ಧೆಗಳು, ಮಹಾತ್ಮರ ಮತ್ತು ಮಹನೀಯರ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ.
ಅ. 6ರಂದು ಬೆಳಗ್ಗೆ 10ಕ್ಕೆ ಧಾರವಾಡ ಮುರುಘಾಮಠದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಧರ್ಮ ಧ್ವಜಾರೋಹಣ ನೆರವೇರಲಿದ್ದು, ಜಗದ್ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಾನಸದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಭೂಸನೂರದ ಶ್ರೀ ಪಟ್ಟಾರಿ ಮತ್ತು ಚನ್ನಬಸವ ಸ್ವಾಮೀಜಿ, ಕಾತಾಳ ಮಹಾಂತೇಶ್ವರ ಮಠದ ಶ್ರೀ ಘನಲಿಂಗದೇವರು ನೇತೃತ್ವ ವಹಿಸುವರು. ಸಂಜೆ 5ಕ್ಕೆ ನಡೆಯಲಿರುವ ದಸರಾ ಮಹೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸುವರು. ಶಾಸಕ ಪ್ರಸಾದ ಅಬ್ಬಯ್ಯ ಅಧ್ಯಕ್ಷತೆ ವಹಿಸುವರು.
ಇಂದಿನಿಂದ ನವರಾತ್ರಿ ಕಾರ್ಯಕ್ರಮ
ಹುಬ್ಬಳ್ಳಿ: ನಗರದ ನಾಗಶೆಟ್ಟಿಕೊಪ್ಪದ ಶಾಂಡಿಲ್ಯಾಶ್ರಮದಲ್ಲಿ ಅ. 5ರಿಂದ 12ರ ವರೆಗೆ ನವರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಿತ್ಯ ಸಂಜೆ 5.30ಕ್ಕೆ ಶ್ರೀ ದೇವಿ ಮಹಾತ್ಮೆ ಪುರಾಣದ ನಂತರ ಶ್ರೀ ಚಂದ್ರಶೇಖರ್ ಸ್ವಾಮೀಜಿ ಅವರಿಂದ ವಿಡಿಯೋ ಮುಖಾಂತರ ಪ್ರವಚನ ನಡೆಯುವುದು.
ಸಹಸ್ರನಾಮ ಕುಂಕುಮಾರ್ಚನೆ
ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದ ಕೋಟೆಹೊಂಡ ಬಳಿ ಇರುವ ದಿಗಂಬರ ಜೈನ ಸಮಾಜದ ಶ್ರೀ ಮಹಾವೀರ ತೀರ್ಥಂಕರ ಕೋಟೆ ಬಸದಿಯಲ್ಲಿ ಅ. 5ರಿಂದ 13ರ ವರೆಗೆ ಮಹಾನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಜೆ ಪದ್ಮಾವತಿ ಅಮ್ಮನವರಿಗೆ ಸಹಸ್ರ ನಾಮ ಕುಂಕುಮಾರ್ಚನೆ ಕಾರ್ಯಕ್ರಮ ಜರುಗುವುದು.  ಪ್ರತಿದಿನ ಬೆಳಗ್ಗೆ ಬಸದಿ ಮೂಲ ನಾಯಕನಾದ ಮಹಾವೀರ ತೀರ್ಥಂಕರಿಗೆ ಪಂಚಾಮೃತಾಭಿಷೇಕ ಜರುಗುವುದು. ಸಂಜೆ 7ಕ್ಕೆ ಮಹಿಳಾ ಸಮಾಜದವರಿಂದ ಪದ್ಮಾವತಿ ದೇವಿ ಅಮ್ಮವರಿಗೆ ಸಹಸ್ರನಾಮ ಕುಂಕುಮಾರ್ಚನೆ ಹಾಗೂ ಭಕ್ತಿಗೀತೆಗಳು ನೃತ್ಯೆಗಳು ಹಾಗೂ ಮಹಾಮಂಗಳಾರತಿ ಜರುಗುವುದು ಎಂದು ಗುಡಗೇರಿ ಜೈನ್ ಸಮಾಜದ ಅಧ್ಯಕ್ಷ ದಯಾನಂದ ಕುಂದೂರು ಪ್ರಕಟಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement