ಶಾಲೆಗೆ ನೀರು ಶುದ್ಧೀಕರಣ ಯಂತ್ರ ದೇಣಿಗೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 5
ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಲಭಿಸಲಿ ಎನ್ನುವ ಉದ್ದೇಶದಿಂದ ಈಚೆಗೆ ಯೂನಿಯನ್ ಬ್ಯಾಂಕ್ ವತಿಯಿಂದ ನವನಗರದ ರೋಟರಿ ಶಾಲೆಗೆ ನೀರು ಶುದ್ಧೀಕರಣ ಯಂತ್ರ ಪೂರೈಸಲಾಯಿತು.
ನವನಗರದ ರೋಟರಿ ಶಾಲೆಯಲ್ಲಿ ಮಹಾತ್ಮಾ ಗಾಂಧಿ ಜಯಂತಿಯಂದು ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಡಾ. ಆರ್.ಎಸ್. ಸವದಿ ನೀರು ಶುದ್ಧೀಕರಣ ಉದ್ಘಾಟಿಸಿ ಮಕ್ಕಳಿಗೆ ಕುಡಿಯುವ ನೀರು ವಿತರಿಸಿದರು. ಯೂನಿಯನ್ ಬ್ಯಾಂಕ್ನ ನವನಗರ ಶಾಖೆ ವತಿಯಿಂದ ಕೆಂಟ್ ಕಂಪನಿಯ ನೀರು ಶುದ್ಧೀಕರಣ ಯಂತ್ರ ನೀಡಲಾಗಿದೆ.
ನೀರು ಶುದ್ಧೀಕರಣ ಯಂತ್ರ ಉದ್ಘಾಟಿಸಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ಆರ್. ಎಸ್. ಸವದಿ, ಶಾಲೆಯ ವಿದ್ಯಾರ್ಥಿಗಳು ನೀರು ಶುದ್ಧೀಕರಣ ಯಂತ್ರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಾಲೆಯ ಮುಖ್ಯಾಧ್ಯಾಪಕಿ ಕಲ್ಬುರ್ಗಿ ಮತ್ತು ರೋಟರಿ ಸಂಸ್ಥೆಯ ಹೆಗ್ಡೆ ಅವರು ನೀರು ಶುದ್ಧೀಕರಣ ಘಟಕ ದೇಣಿಗೆ ನೀಡಿದ ಬ್ಯಾಂಕಿನ ಸಿಬ್ಬಂದಿ ಮತ್ತು ಬ್ಯಾಂಕಿಗೆ ಪ್ರಶಂಸೆ ವ್ಯಕ್ತಪಡಿಸಿದರು.