ಧಾರವಾಡ: ಇಂದು ಸಾಂಸ್ಕೃತಿಕ ಉತ್ಸವ
ಧಾರವಾಡ: ಕಲಾಸಂಗಮ ಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅ. 7ರಂದು ವಿದ್ಯಾವರ್ಧಕ ಸಂಘದಲ್ಲಿ ಸಂಗೀತ, ಹಾಸ್ಯ, ನೃತ್ಯ, ನಾಟಕ ಪ್ರದರ್ಶನ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಂಡಿದೆ. ಕರ್ನಾಟಕ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಆನಂದಕುಮಾರ ಮುಗದುಮ್ ಅಂದು ಸಂಜೆ 5ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಂಬೈನ ಸುಧೀರ ದಾಮನ್ಸಕರ (ಕಲೆ), ಅನೀಸ ಬಾರುದ್ವಾಲೆ (ಸಾಹಿತ್ಯ) ಹಾಗೂ ಎಲ್.ಆರ್. ಬೂದಿಹಾಳ (ರಂಗಭೂಮಿ) ಅವರನ್ನು ಸನ್ಮಾನಿಸಲಾಗುವುದು. ಮಲ್ಲಪ್ಪ ಹೊಂಗಲ ಅವರಿಂದ ಹಾಸ್ಯ ಕಾರ್ಯಕ್ರಮ ಹಾಗೂ ಎಲ್.ಜಿ. ದೇವಾಂಗಮಠ ಅವರ ಹೆಂಡ್ತಿ ಬೇಕು ಹೆಂಡ್ತಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಕಲಾಸಂಗಮದ ಅಧ್ಯಕ್ಷ ಪ್ರಭು ಹಂಚಿನಾಳ ತಿಳಿಸಿದ್ದಾರೆ.