ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಿಕ್ಷಕ ವೃತ್ತಿಯ ಮಟ್ಟ ಕುಸಿತ: ವಿಷಾದ

Lingaraj Badiger
Updated On : 8 Oct 2013, 11:27 am

ಧಾರವಾಡ: ಒಂದು ಕಾಲಕ್ಕೆ ಶಿಕ್ಷಕ ವೃತ್ತಿಯಲ್ಲಿ ತನ್ನ ಶಿಷ್ಯ ಬಳಗ, ಅವರ ಪೋಷಕ ವರ್ಗ ಮತ್ತು ತಾನು ದುಡಿಯುವ ಸಂಸ್ಥೆ ಇವೆಲ್ಲವುಗಳಲ್ಲಿಯೂ ಅಪಾರ ಪ್ರೀತಿ ಮತ್ತು ಮಾನಸಿಕ ನೆಮ್ಮದಿ ಇತ್ತು. ಅದೊಂದು ಪವಿತ್ರ ವೃತ್ತಿಯಾಗಿತ್ತು. ಆದರೆ, ಇಂದು ಕಾಲಕ್ಕೆ ತಕ್ಕಂತೆ ದೊರೆಯುತ್ತಿರುವ ಅನೇಕ ಸೌಕರ್ಯಗಳ ನಡುವೆಯೂ ಶಿಕ್ಷಕ ವೃತ್ತಿಯ ಮಟ್ಟ ಕುಸಿಯುತ್ತಿರುವುದು ದುರ್ದೈವದ ಸಂಗತಿ ಎಂದು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅಭಿಪ್ರಾಯಿಸಿದರು.
ವಿಶ್ವ ಶಿಕ್ಷಕರ ದಿನದ ಅಂಗವಾಗಿ ಇತ್ತೀಚಿಗೆ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ದಾರಿ ದೀಪವಾಗಲಿ: ಮಧುರಚೆನ್ನ, ಮಾಸ್ತಿ, ಪು.ತಿ.ನ., ಚನ್ನವೀರ ಕಣವಿ, ಡಿ.ಎಸ್. ಕರ್ಕಿಯ ಅವರಿಂದ ಹಿಡಿದು ಇಂದಿನ ಕಿರಿಯ ಕವಿಗಳವರೆಗೂ ಅನೇಕರು ಅಂಬಿಕಾತನಯದತ್ತರ ಕುರಿತಾಗಿ ಬರೆದಿರುವ ಕವನಗಳ ಸಂಪಾದಿತ ಕೃತಿ ಕವಿ ಕಂಗಳಲಿ ವರಕವಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಕ ಇಲಾಖೆಯ ಉಪನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ, ಮನುಷ್ಯನ ದಿವ್ಯಶಕ್ತಿ ಜಾಗೃತಗೊಳಿಸುವ ಪರಿಪೂರ್ಣ ಶಿಕ್ಷಣದ ಸರಿಯಾದ ಕಲ್ಪನೆ ಹೊಂದಿದ್ದ ಬೇಂದ್ರೆಯವರ ಆದರ್ಶ ಇಂದಿನ ಶಿಕ್ಷಕ ವೃಂದಕ್ಕೆ ದಾರಿ ದೀಪವಾಗಲಿ ಎಂದರು. ಶಿಕ್ಷಕ ಡಬ್ಲ್ಯೂ.ಡಿ. ಧಾರವಾಡ, ಡಾ. ಜಯಶ್ರೀ ಮುದಿಗೌಡರ, ಬಿ.ಜಿ. ಅಣ್ಣಿಗೇರಿ ಅವರನ್ನು ಬೇಂದ್ರೆ ಮಾಸ್ತರ್ ನೆನಪಿನ ಫಲಕ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕವಿ ಎಂ.ಡಿ. ಗೋಗೇರಿ, ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ, ಭಾಗ್ಯಜ್ಯೋತಿ ಹಿರೇಮಠ ಮತ್ತು ಡಾ. ಎಚ್.ಬಿ. ಪೂಜಾರರು, ಟ್ರಸ್ಟ್ ಸದಸ್ಯ ನರಸಿಂಹ ಪರಾಂಜಪೆ ಇದ್ದರು. ಪ್ರಿಯಾ ಪುರಾಣಿಕಮಠ ಪ್ರಾರ್ಥಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement