ಇಂದುಮತಿ, ಪಂಚಾಕ್ಷರಿ ಸ್ವಾಮಿಗೆ ಶ್ರದ್ಧಾಂಜಲಿ
ಧಾರವಾಡ: ಕಳೆದ ವಾರ ನಿಧನರಾದ ಇಂದುಮತಿ ಪಾಟೀಲ ಹಾಗೂ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ನಿಧನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ, ಇಬ್ಬರೂ ಸಾಧಕರು ತಮ್ಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಸ್ಮರಿಸಿದರು. ಇಂದುಮತಿ ಪಾಟೀಲ ಆದರ್ಶ ಗೃಹಿಣಿಯಾಗಿ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದರು. ತಮ್ಮ ಪತಿಯ ಎಲ್ಲ ಕೆಲಸ ಕಾರ್ಯಗಳಲ್ಲಿ ಅವರ ಹಿಂದೆ ಶಕ್ತಿಯಾಗಿ ಅಹರ್ನಿಶಿ ಶ್ರಮಿಸಿದವರಾಗಿದ್ದರು ಎಂದರು. ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರು ಗ್ರಾಮೀಣ ಭಾಗದಿಂದ ಬಂದು ಸತತ ಪರಿಶ್ರಮ ಸಾಧನೆಯಿಂದ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿ, ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು ಎಂದರು.
ಜಯದೇವಿ ಜಂಗಮಶೆಟ್ಟಿ, ಡಾ. ಶಾಂತಾರಾಂ ಹೆಗಡೆ, ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ, ಡಾ. ಮೃತ್ಯುಂಜಯ ಅಗಡಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಮೋಹನ ನಾಗಮ್ಮನವರ, ಗುರು ಹಿರೇಮಠ, ಶಂಕರ ಕುಂಬಿ, ಶಿವಪುತ್ರಯ್ಯ ರಾಚಯ್ಯನವರ ಮಾತನಾಡಿದರು. ಶಾಂತಮ್ಮ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ, ಸಂಘದ ಗೌರವ ಉಪಾಧ್ಯಕ್ಷ ಜಿ.ಜಿ. ದೊಡವಾಡ, ಶಿವಾನಂದ ಭಾವಿಕಟ್ಟಿ ಇದ್ದರು. ವೀರಣ್ಣ ಒಡ್ಡೀನ, ಪ್ರೇಮಾ ಬದಾಮಿ, ಸುಜಾತಾ ಹಡಗಲಿ, ಮುಕುಂದ ಕುಲಕರ್ಣಿ, ಲಕ್ಷ್ಮಣ ಬಕ್ಕಾಯಿ, ಡಾ. ಲಿಂಗರಾಜ ಅಂಗಡಿ ಇದ್ದರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಲಾಯಿತು.