ಮೋಸದಿಂದ ಮಹಿಳೆ ಹಣ ಗುಳುಂ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 8
ತನ್ನ ಭೂಮಿ ಸ್ವಾಧೀನಪಡಿಸಿಕೊಂಡು ಕೆಐಎಡಿಬಿ ನೀಡಿದ ಹಣವನ್ನು ಮೋಸದ ಮೂಲಕ ಲಪಟಾಯಿಸಿದ್ದಾರೆಂದು ಆರೋಪಿಸಿ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಮಹಿಳೆಯೊಬ್ಬರು ಗರಗ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಸದ್ಯ ವಾಸವಿರುವ ಇಲ್ಲಿನ ಮುಮ್ಮಿಗಟ್ಟಿಯ ಬೀಬಿಜಾನ್ ಚರಕ ಎಂಬುವರೇ ದೂರು ಸಲ್ಲಿಸಿದ್ದು, ಕಳೆದ ಕೆಲ ವರ್ಷಗಳ ಹಿಂದೆ ಕೆಐಎಡಿಬಿಯು ತನ್ನ ಹಾಗೂ ತನ್ನ ಸಂಬಂಧಿಕರ ಹೆಸರಿನಲ್ಲಿರುವ 12.37 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಭೂಮಿಯ ಹಣವನ್ನು ಹಂತ ಹಂತವಾಗಿ ನೀಡುವುದಾಗಿ ತಿಳಿಸಿತ್ತು. ಹಾಗಾಗಿ ಆಂಧ್ರಪ್ರದೇಶಕ್ಕೆ ದುಡಿಯಲು ಹೋಗಿದ್ದೇ. ಇತ್ತೀಚೆಗೆ ಗ್ರಾಮಕ್ಕೆ ಆಗಮಿಸಿದಾಗ ಹಣದ ಬಗ್ಗೆ ತಮ್ಮ ಸಹೋದರ ಹಾಗೂ ಸಂಬಂಧಿಕರಾದ ಕಾಸೀಮಸಾಬ್ ಹಬಟೇಲಸಾಬ್ ಇನ್ನಿತರರು ನನ್ನ ಹೆಸರಿಗೆ ಬಂದ ರು. 22.55 ಲಕ್ಷ ಮೋಸ ಮಾಡಿ ನುಂಗಿ ಹಾಕಿದ್ದಾರೆ. ಅದನ್ನು ಕೊಡಿಸಬೇಕೆಂದು ಮನವಿ ಮಾಡಿದ್ದಾರೆ. ತನ್ನ ಹೆಂಡತಿಯನ್ನೇ ಸಹೋದರಿ ಎಂದು ಫೋಟೋ ತೆಗೆದುಕೊಂಡು ಮೋಸ ಮಾಡಲಾಗಿದೆ. ಆದ್ದರಿಂದ ನನ್ನ ಪಾಲಿಗೆ ಬರುವ ಹಣ ಕೊಡಿಸಬೇಕೆಂದು ಪೊಲೀಸರಿಗೆ ಬೀಬಾಜಾನ್ ಕೇಳಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.