ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿದ್ಯುತ್ ಸ್ಥಗಿತ: ಅಧಿಕಾರಿ ತರಾಟೆಗೆ

Lingaraj Badiger
Updated On : 9 Oct 2013, 11:31 am

ಕುಂದಗೋಳ: ಕಳೆದ ಎರಡು ವರ್ಷಗಳ ಹಿಂದೆ ಸ್ಥಳಾಂತರಗೊಂಡ ತಾಲೂಕಿನ ಮುಳ್ಳೂಳ್ಳಿ ನವ ಗ್ರಾಮದ 320 ಮನೆಗಳಿಗೆ ದಿಢೀರ್ ವಿದ್ಯುತ್ ಕಡಿತಗೊಳಿಸಿದ್ದಕ್ಕೆ ಸ್ಥಳೀಯ ಶಾಸಕ ಸಿ.ಎಸ್. ಶಿವಳ್ಳಿ ಹೆಸ್ಕಾಂ ಅಧಿಕಾರಿ ನಾಗರಾಜ ಅವರನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರ ತಹಸೀಲ್ದಾರ್ ಕಚೇರಿಯಲ್ಲಿ ಮುಳ್ಳೂಳ್ಳಿ ನವ ಗ್ರಾಮದ 320 ಮನೆಗಳಿಗೆ ಏಕಾಏಕಿ ವಿದ್ಯುತ್ ಕಡಿತಗೊಳಿಸಿದ ಕಾರಣಕ್ಕೆ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮಳ್ಳೂಳ್ಳಿ ಗ್ರಾಮಸ್ಥರು, ನವರಾತ್ರಿಯಂಥ ದೊಡ್ಡ ಹಬ್ಬದಲ್ಲಿ ಯಾರನ್ನು ಕೇಳಿ ವಿದ್ಯುತ್ ಕಡಿತಗೊಳಿಸಿದ್ದೀರಿ ಎಂದು ಹೆಸ್ಕಾಂ ಸಹಾಯಕ ಎಂಜಿನಿಯರ್‌ರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಎಂಜಿನಿಯರ್ ಮನೆಯ ಹಕ್ಕು ಪತ್ರವನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ ಅಲ್ಲಿ ವರೆಗೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ ಎಂದರು. ಆಗ ಶಾಸಕರ ಎದುರೇ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಆಗ ಮಧ್ಯ ಪ್ರವೇಶಿಸಿದ ಶಾಸಕ ಶಿವಳ್ಳಿ ಸಹ ಎಂಜಿನಿಯರ್‌ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಕುರಿತಂತೆ ತಹಸೀಲ್ದಾರ್, ತಾಪಂ ಅಧಿಕಾರಿಗಳು, ಗ್ರಾಪಂ ಸದಸ್ಯರೊಂದಿಗೆ ಸಮಾಲೋಚಿಸಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಿ. ಮುಂದೆ ಈ ರೀತಿ ಸಮಸ್ಯೆ ಬಾರದ ಹಾಗೆ ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಎಂದರು.
ಪಪಂ ಸದಸ್ಯ ಬಸವರಾಜ ದೊಡಮನಿ, ಅಜೀಜ್ ಕ್ಯಾಲಕೊಂಡ, ಬಸವರಾಜ ವಟವಟಿ, ಚಿದಾನಂದ ಬಡಿಗೇರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement