ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹುಬ್ಬಳ್ಳಿ: ಲ್ಯಾಪ್‌ಟಾಪ್, ಮೊಬೈಲ್ ಕಳ್ಳತನ

Lingaraj Badiger
Updated On : 9 Oct 2013, 11:32 am

ಹುಬ್ಬಳ್ಳಿ: ಇಲ್ಲಿನ ಕೊಪ್ಪಿಕರ್ ರಸ್ತೆಯಲ್ಲಿ ಬೊಲೇರೊ ವಾಹನ ನಿಲ್ಲಿಸಿಕೊಂಡು ನಿಂತಿದ್ದ ಮಹಿಳೆಗೆ ನಿಮ್ಮ ಹಣ ಬಿದ್ದಿದೆ ಎಂದು ಸುಳ್ಳು ಹೇಳಿ ವಾಹನದಲ್ಲಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್‌ನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಿಸಿ ಪರಾರಿಯಾಗಿರುವ ವಂಚನೆ ಪ್ರಕರಣ ಉಪನಗರ ಠಾಣೆಯಲ್ಲಿ ದಾಖಲಾಗಿದೆ. ಹಳೇ ಹುಬ್ಬಳ್ಳಿಯ ನಾಗಲಿಂಗ ನಗರದ ಪೂನಂ ಪ್ರಮೋದ ಹುಟಗಿಕರ್ ಅವರು ಕೊಪ್ಪಿಕರ್ ರಸ್ತೆಯಲ್ಲಿನ ಪುಸ್ತಕ ಮಳಿಗೆ ಬಳಿ ನಿಂತಿದ್ದ ವೇಳೆ ವಾಹನದ ಹತ್ತಿರ ಬಂದ ಅಪರಿಚಿತ ವ್ಯಕ್ತಿಯೊಬ್ಬ ನಿಮ್ಮ ವಾಹನದ ಎದುರು ಹಣ ಬಿದ್ದಿದೆ ಎಂದು ಹೇಳಿ ಪೂನಂ ಅವರು ಕೆಳಗಿಳಿಯುವಂತೆ ಮಾಡಿ ವಾಹನದಲ್ಲಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಎತ್ತಿಕೊಂಡು ಪರಾರಿಯಾಗಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement