ಜಿಲ್ಲಾ ಲೀಡ್ ಬ್ಯಾಂಕ್ ಸಭೆ
ಧಾರವಾಡ: ವಿಜಯಾ ಬ್ಯಾಂಕ್ ನೇತೃತ್ವದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಸಭೆ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿತು.
ವಿಜಯಾ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ನೇರ ನಗದು ಪಾವತಿ ಯೋಜನೆ ಅನುಷ್ಠಾನದ ನೋಡಲ್ ಅಧಿಕಾರಿ ಕೆ.ಆರ್. ಶೆಣೈ, ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿ, ಭಾರತ ಸರ್ಕಾರದ ಸೂಚನೆಯಂತೆ ಬ್ಯಾಂಕುಗಳು ಬ್ಯಾಂಕ್ ಖಾತೆ ತೆರೆಯುವ ಸಂಪೂರ್ಣ ಸೇರ್ಪಡೆ ಯೋಜನೆಯನ್ನು ಸಕಾಲಕ್ಕೆ ಪೂರ್ಣಗೊಳಿಸಬೇಕಾಗಿದೆ. ಜೊತೆಗೆ ಸರ್ಕಾರದ ಸೂಚನೆಯಂತೆ ನೊಂದಣಿಯಾದ ಆಧಾರ್ ಸಂಖ್ಯೆಗಳನ್ನು ಬ್ಯಾಂಕ್ ಖಾತೆಗೆ ಸೇರ್ಪಡೆಗೊಳಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ನಿಭಾಯಿಸಬೇಕು ಎಂದು ಸೂಚಿಸಿದರು.
ಆಯಿಲ್ ಕಂಪನಿಗಳು ಆಧಾರ್ ಮಾಡಿಸಿದ ಗ್ರಾಹಕರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡಿದಲ್ಲಿ, ಜಿಲ್ಲಾ ಆಡಳಿತ ಆಯಾ ವಾರ್ಡ್ ಸ್ಥಳಗಳಲ್ಲಿ ಆಧಾರ್ ನೋಂದಣಿಗೆ ವ್ಯವಸ್ಥೆ ಕಲ್ಪಿಸುವುದು. ಇದರಿಂದ ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಗುರುತಿನ ಸಂಖ್ಯೆ ಸೇರ್ಪಡೆ ತೀವ್ರಗೊಳ್ಳುವುದು ಎಂದರು.
ಜಿಲ್ಲಾಧಿಕಾರಿ ಸಮೀರ್ಶುಕ್ಲ ಅಧ್ಯಕ್ಷತೆ ವಹಿಸಿದ್ದರು. ವಿಜಯಾ ಬ್ಯಾಂಕಿನ ಕೇಂದ್ರ ಕಚೇರಿಯ ಉಪ ಮಹಾವ್ಯವಸ್ಥಾಪಕ ಸತೀಶ ಬಲ್ಲಾಳ, ವಿವಿಧ ಆಯಿಲ್ ಕಂಪನಿಗಳ ಅಧಿಕಾರಿಗಳು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಅಧಿಕಾರಿ ಜಿ. ಗಿರಿಧರ ಹಾಗೂ ಜಿಲ್ಲಾ ಆಧಾರ್ ಯೋಜನೆ ನೋಡಲ್ ಅಧಿಕಾರಿ ಬಿ. ಮಲ್ಲಿಕಾರ್ಜುನ ಇದ್ದರು. ವಿಜಯಾ ಬ್ಯಾಂಕ್ ಕ್ಷೇತ್ರೀಯ ಪ್ರಬಂಧಕ ಶ್ರೀಧರಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಸ್. ಹೂಗಾರ ವಂದಿಸಿದರು.