ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನವೆಂಬರ್ 1ರಿಂದ 6ನೇ ಆರ್ಥಿಕ ಗಣತಿ

Vishwanath S
Updated On : 10 Oct 2013, 10:51 am

ಧಾರವಾಡ: ನವೆಂಬರ್ 1ರಿಂದ 30ರ ವರೆಗೆ ಜರುಗುವ 6ನೇ ಆರ್ಥಿಕ ಗಣತಿಯ ಪೂರ್ವಸಿದ್ಧತಾ ಸಭೆ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಜಿಲ್ಲೆಯಲ್ಲಿ ಆರ್ಥಿಕ ಗಣತಿಗೆ ಸಂಬಂಧಿಸಿದಂತೆ ಚಾರ್ಜ್ ಅಧಿಕಾರಿಗಳನ್ನು ಈಗಾಗಲೇ ನಿಯಮಿಸಲಾಗಿದೆ. 1170 ಗಣತಿದಾರರನ್ನು ಹಾಗೂ 590 ಮೇಲ್ವಿಚಾರಕರನ್ನು ನೇಮಿಸಬೇಕಿದ್ದು, ಚಾರ್ಜ್ ಅಧಿಕಾರಿಗಳು ತಕ್ಷಣವೇ ಸಂಬಂಧಿತರಿಗೆ ನೇಮಕ ಆದೇಶಗಳನ್ನು ಜಾರಿಗೊಳಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಗೆ ಇರುವ ಬ್ಲಾಕ್ ಹಂತದ ಅಧಿಕಾರಿಯನ್ನು (ಬಿಎಲ್‌ಒ) ಹೊರತುಪಡಿಸಿ ಹಾಗೂ ಹಿಂದಿನ ಗಣತಿಯಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಿ ನೇಮಕ ಮಾಡಬೇಕು. ಈ ಕುರಿತಂತೆ ಸಿದ್ಧವಿರುವ ಪಟ್ಟಿಯನ್ನು ಆಯಾ ತಾಲೂಕಿನ ತಹಸೀಲ್ದಾರ್‌ರೊಂದಿಗೆ ಹಾಗೂ ಪಾಲಿಕೆ ಆಯುಕ್ತರೊಂದಿಗೆ ಸಮಾಲೋಚಿಸಿ ನೇಮಕ ಮಾಡಲು ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮೇಲ್ವಿಚಾರಕರಿಗೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಅ. 17ರಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ಇದ್ದು, ತಪ್ಪದೇ ಹಾಜರಾಗಲು ಹಾಗೂ ಗಣತಿದಾರರಿಗೆ ಗಣತಿ ಪ್ರದೇಶ ಸೂಚಿಸುವಾಗ ಅವರು ಆ ಪ್ರದೇಶದಲ್ಲಿ ವಾಸಿಸುವ ಹಾಗೂ ಅದರ ಸುತ್ತಲಿನ ಪ್ರದೇಶವನ್ನೇ ನೀಡಲು ಅಪರ ಜಿಲ್ಲಾಧಿಕಾರಿ ಸಲಹೆ ಮಾಡಿದರು. ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಮಾತನಾಡಿದರು. ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಸೈಯದ್ ಪರ್ವೀನ್, ಜಿಲ್ಲೆಯ ವಿವಿಧ ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ನಗರಸಭೆ ಹಾಗೂ ಪಾಲಿಕೆ ಅಧಿಕಾರಿಗಳು ಅಂಕಿ ಸಂಖ್ಯೆ ಇಲಾಖೆಯ ಸಹಾಯಕ ಸಂಖ್ಯಾಧಿಕಾರಿ ಬಿ.ಐ. ಹುಲಕುಂದ, ಸಹಾಯಕ ನಿರ್ದೇಶಕ ಎಂ.ಆರ್. ಜಮಾದಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement