ಅಮಿತಾಬ್ ಜನ್ಮದಿನ: ಇಂದು ಸಂಗೀತ ಕಾರ್ಯಕ್ರಮ
ಧಾರವಾಡ: ಹಿಂದಿಯ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರ 71ನೇ ಹುಟ್ಟುಹಬ್ಬದ ಅಂಗವಾಗಿ ಇಲ್ಲಿನ ಹೊಟೇಲ್ ಮಂದಾರದಲ್ಲಿ ಅ. 11 ರಂದು ಸಂಜೆ 7.30ಕ್ಕೆ ಅಮಿತಾಬ್ ಬಚ್ಚನ್ ಅವರ ಹಾಡುಗಳ ವಿಶೇಷ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಮಿತಾಬ್ ನಟಿಸಿರುವ ಚಿತ್ರಗಳಲ್ಲಿ ಹಾಡಿರುವ ಕಿಶೋರ್ಕುಮಾರ ಹಾಗೂ ಖ್ಯಾತ ಗಾಯಕರ ಹಾಡುಗಳನ್ನು ಸ್ಥಳೀಯ ಕಲಾವಿದರು ಹಾಡಲಿದ್ದಾರೆ ಎಂದು ಹೊಟೇಲ್ ಮಂದಾರದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕಾವ್ಯವಾಚನ
ಹುಬ್ಬಳ್ಳಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಅ. 11ರಂದು ಸಂಜೆ 6ಕ್ಕೆ ದೂರದರ್ಶನ ಕಾರ್ಯಕ್ರಮ ನಿರ್ಮಾಪಕಿ ಎಚ್.ಎನ್. ಆರತಿ ಅವರ ಕಾವ್ಯ ವಾಚನ ಮತ್ತು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಗೌರವ ಕೋಶಾಧ್ಯಕ್ಷ ಚನ್ನಪ್ಪ ಅಂಗಡಿ, ಅನಿಲ ದೇಸಾಯಿ ಮತ್ತು ಡಾ ವೈ.ಎಂ. ಭಜಂತ್ರಿ ಉಪಸ್ಥಿತರಿರುವರು.