ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಭಾವನೆಗಳಿಗೆ ಮೂರ್ತರೂಪ ಕೊಡುವ ಕಲೆ ರಂಗಭೂಮಿ

Vishwanath S
Updated On : 12 Oct 2013, 12:02 pm

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 11
ರಂಗಭೂಮಿ ಮನುಷ್ಯನ ಭಾವನೆಗಳಿಗೆ ಮೂರ್ತರೂಪ ಕೊಡುವ ಕಲೆ. ಒಂದು ನಾಟಕಕ್ಕೆ ಸಾತ್ವಿಕ ಜೀವನದಲ್ಲಿ ನ್ಯಾಯಪರ ನೀತಿ ದೊರಕಿಸಿಕೊಡುವ ಶಕ್ತಿ ಇದೆ ಎಂದು ಹಿರಿಯ ವಿಮರ್ಶಕ ಡಾ. ಶ್ಯಾಮಸುಂದರ ಬಿದರಕುಂದಿ ಹೇಳಿದರು.
ಇಲ್ಲಿನ ರಂಗಾಯಣ ಆವರಣದಲ್ಲಿ ನಡೆಯುತ್ತಿರುವ ನವರಾತ್ರಿ ಯುವರಂಗೋತ್ಸವದ 7ನೇ ದಿನದ ನಾಟಕ ಪ್ರದರ್ಶನ ಉದ್ಘಾಟಿಸಿ, ಷೆಕ್ಷಪೀಯರ್‌ನ ಮೂಲ ದಿ ಟೆಂಪೆಸ್ಟ್ ನಾಟಕವನ್ನು ಕನ್ನಡೀಕರಿಸಿ, ಅದು ನಮ್ಮದೇ ನಾಟಕ ಎನ್ನುವಷ್ಟು ಪ್ರಭಾವಶಾಲಿಯಾಗಿ ರಚಿಸಿದ್ದಾರೆ. ಅಂತಹ ಒಂದು ಗಟ್ಟಿ ನಾಟಕವನ್ನು ವಿದ್ಯಾರ್ಥಿಗಳು ಅಭಿನಯಿಸುವ ಮೂಲಕ ಹಳಗನ್ನಡ ಪರಂಪರೆಯನ್ನು ಮುಂದುವರಿಸುತ್ತಿರುವುದು ಅಭಿನಂದನೀಯ ಎಂದರು.
ರಂಗ ಸಂಘಟಿಕ ಎಸ್.ಎನ್. ದೇಶಪಾಂಡೆ ಮಾತನಾಡಿ, ಒಂದು ನಾಟಕ ಪ್ರದರ್ಶನಗೊಳ್ಳಬೇಕಾದರೆ ಅದಕ್ಕೆ ಪೂರಕವಾಗಿ ಅನೇಕ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಅದು ಶ್ರಮ ಮತ್ತು ಶ್ರದ್ಧೆಯನ್ನು ಅಪೇಕ್ಷಿಸುತ್ತದೆ. ಈ ನಿಟ್ಟಿನಲ್ಲಿ ರಂಗಾಯಣ ಅರ್ಥಪೂರ್ಣ ಕಾರ್ಯ ನಿರ್ವಹಿಸುತ್ತಿದೆ ಎಂದರು.
ರಂಗ ಕಲಾವಿದೆ ಸುಮತಿಶ್ರೀ ನವಲಿಹಿರೇಮಠ, ರಂಗಭೂಮಿಗೆ ಅತ್ಯಂತ ಪ್ರಾಚೀನ ಪರಂಪರೆ ಇದೆ. ಈ ಕ್ಷೇತ್ರಲ್ಲಿ ಸಾಧನೆಗೈದ ಅನೇಕ ಹಿರಿಯ ಕಲಾವಿದರು ಇಂದು ನಮ್ಮ ಜೊತೆಗಿಲ್ಲ. ಅಂಥವರನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ರಂಗಾಯಣ ಇಂಥ ಉತ್ಸವಗಳನ್ನು ಹಿರಿಯ ಕಲಾವಿದರ ನೆನಪಿನಲ್ಲಿ ನಡೆಸುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ, ನಾಟಕ ಕಲೆ ವಿಸ್ತಾರಗೊಳ್ಳಲು ತನ್ನದೇ ಆದ ಜಾಲ ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ಇಂದಿನ ಯುವಕರು ರಂಗ ಕಲೆ ಕುರಿತು ಆಸಕ್ತಿ ತೋರುತ್ತಿರುವುದು ಧನಾತ್ಮಕ ಬೆಳವಣಿಗೆ. ಪ್ರತಿವರ್ಷ ರಂಗಾಯಣ ಕಾಲೇಜು ವಿದ್ಯಾರ್ಥಿಗಳಿಗಾಗಿ ನಾಟಕೋತ್ಸವ ಸಂಘಟಿಸುತ್ತಿರುವುದು ಸ್ತುತ್ಯಾರ್ಹ ಎಂದರು.
ಆಡಳಿತಾಧಿಕಾರಿ ಕೆ.ಎಚ್. ಚನ್ನೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ವಾರ್ತಾಧಿಕಾರಿ ಪಿ.ಎಸ್. ಹಿರೇಮಠ ವಂದಿಸಿದರು. ಶಿವಾನಂದ ಹೂಗಾರ ನಿರೂಪಿಸಿದರು.
ನಂತರ ರಾಜೇಶ್ವರಿ ಸುಳ್ಯ ನಿರ್ದೇಶನದಲ್ಲಿ ಧಾರವಾಡದ ಸೃಷ್ಟಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ವಿದ್ಯಾರ್ಥಿಗಳು ಷೇಕ್ಸಪೀಯರ್ ನಾಟಕದ ಕನ್ನಡ ರೂಪಾಂತರ ಕುವೆಂಪು ಅವರ ಬಿರುಗಾಳಿ ನಾಟಕ ಪ್ರಸ್ತುತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement