ಹಲ್ಲೆ: ಆರೋಪಿ ಬಂಧನ
ಧಾರವಾಡ: ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಓರ್ವನನ್ನು ಇಲ್ಲಿನ ಶಹರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹೊನ್ನಿದಿಬ್ಬ ಗ್ರಾಮದ ಮೇಲಗಿರಿಯಪ್ಪ ಭೀಮಪ್ಪ ಆಲದಕಟ್ಟಿ ಎಂಬುವನೇ ಬಂಧಿತ ಆರೋಪಿ. ಈತ ಆಟೋ ಚಾಲಕ ಮಂಜುನಾಥ ಹಂಚಿನಾಳ ನಿಗೆ ಬಾಡಿಗೆ ಕೊಡುವ ವಿಚಾರದಲ್ಲಿ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದನು. ಹಲ್ಲೆಗೆ ಒಳಗಾದ ಆಟೋ ಚಾಲಕ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಶಹರ ಠಾಣೆ ಪೊಲೀಸರು ತಿಳಿಸಿದ್ದಾರೆ.
ರು. 40 ಸಾವಿರ ವಂಚನೆ: ದೂರು
ಹುಬ್ಬಳ್ಳಿ: ಮುಂಬೈ ಸ್ಟಾಕ್ ಎಕ್ಸ್‌ಚೇಂಜ್ ಲಿಮಿಟೆಡ್‌ನ ನಕಲಿ ಪ್ರಮಾಣಪತ್ರ ನೀಡಿ ರು. 40 ಸಾವಿರ ವಂಚಿಸಿದ ಕುರಿತು ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಧಾರವಾಡದ ಚಂದ್ರಕಾಂತ ಶಿಂದೆಗೆ ಶಶಿಕಾಂತ ಕುಲಕರ್ಣಿ ಮುಂಬೈ ಸ್ಟಾಕ್ ಎಕ್ಸ್‌ಚೇಂಜ್ ಮಿಲೆನಿಯರ್ ಸ್ಕೀಂನಲ್ಲಿ ರು. 40 ಸಾವಿರವನ್ನು 555 ದಿನಗಳವರೆಗೆ ಹೂಡಿಕೆ ಮಾಡಿದರೆ ರು. 1 ಕೋಟಿ ಲಾಭ ಪಡೆಯಬಹುದು ಎಂದು ಸುಳ್ಳು ಹೇಳಿ ಹಣ ಪಡೆದಿದ್ದಾನೆಂದು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.