ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

20ರಂದು ಸತ್ಯಕಾಮ ಆರಾಧನೆ

Mainashree
Updated On : 18 Oct 2013, 11:35 am

ಹುಬ್ಬಳ್ಳಿ: ಸತ್ಯಕಾಮ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬಾಗಲಕೋಟೆಯ ಕಲ್ಲಹಳ್ಳಿಯಲ್ಲಿ ಅ. 20ರಂದು ಸತ್ಯಕಾಮ ಆರಾಧನೆ ಸಮಾರಂಭ, ವಿವಿಧ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾಹಿತಿ ಶ್ಯಾಮಸುಂದರ ಬಿದರಕುಂದಿ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಕಾಮರ ನೆನಪಿನ ಅಧ್ಯಾತ್ಮಿಕ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಪ್ರತಿಷ್ಠಾಪನೆ ಅಂದು ಬೆಳಗ್ಗೆ 11.15ಕ್ಕೆ ನಡೆಯಲಿದೆ ಎಂದರು. ಇದೇ ಸಂದರ್ಭ 'ಉಪವಾಸ' ನೆನಪಿನ ಭವನವನ್ನು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳು ಉದ್ಘಾಟಿಸಿ ಆಶೀರ್ವಚನ ನೀಡುವರು. ಗ್ರಂಥಾಲಯವನ್ನು ರಾಜ್ಯಸಭೆ ಸದಸ್ಯೆ ಬಿ. ಜಯಶ್ರೀ, ಅತಿಥಿ ಗೃಹವನ್ನು ಸಚಿವೆ ಉಮಾಶ್ರೀ ಉದ್ಘಾಟಿಸುವರು. ಸತ್ಯಕಾಮರ ಕೆಲವು ಕೃತಿಗಳನ್ನು ಸಾಹಿತಿ ಕುಂ. ವೀರಭದ್ರಪ್ಪ ಬಿಡುಗಡೆಗೊಳಿಸುವರು. ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ್ ರಾವ್ ಪಾಲ್ಗೊಳ್ಳುವರು. ಮಧ್ಯಾಹ್ನ 3.30ಕ್ಕೆ ಕುಂ. ವೀರಭದ್ರಪ್ಪ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ಬಳಿಕ ಗಂಗಾವತಿ ಪ್ರಾಣೇಶ ಅವರಿಂದ ಹಾಸ್ಯ ಸಂಜೆ, ರಾಘವೇಂದ್ರ ಹೆಗಡೆ ಮರಳು ಕಲೆ ಪ್ರದರ್ಶಿಸುವರು. ತದ ನಂತರ ಸುಮ್ಮನೆ, ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು ಕೃತಿ ಬಿಡುಗಡೆಗೊಳ್ಳಲಿವೆ ಎಂದು ಬಿದರಕುಂದಿ ತಿಳಿಸಿದರು.  ಸುದ್ದಿಗೋಷ್ಠಿಯಲ್ಲಿ ಸುಶೀಲೇಂದ್ರ ಕುಂದರಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement