ದುರುದ್ದೇಶದ ಆರೋಪ: ಅಷ್ಟಗಿ ಖಂಡನೆ
ಧಾರವಾಡ: ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಮೇಲೆ ಮಾಡುತ್ತಿರುವ ಆರೋಪ ದುರುದ್ದೇಶದ್ದು ಎಂದು ಜಿಪಂ ಮಾಜಿ ಸದಸ್ಯ ತವನಪ್ಪ ಅಷ್ಟಗಿ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಹಲವಾರು ದಶಕಗಳಿಂದ ತಮ್ಮ ಧಾರ್ಮಿಕ ಚಟುವಟಿಕೆ ಮೂಲಕ ಹೆಗ್ಗಡೆ ಕುಟುಂಬ ಹೆಸರುವಾಸಿಯಾಗಿದೆ. ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ನಾಡಿನ ಜನರ ಸೇವೆ ಮಾಡುತ್ತ ಬಂದಿದೆ. ಆದರೆ, ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣ ಮುಂದಿಟ್ಟುಕೊಂಡು ಕೆಲವು ಅತೃಪ್ತರು ಇಲ್ಲ ಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ. ಯಾವುದೇ ರೀತಿಯ ತನಿಖೆಗೆ ಸಿದ್ದವಿರುವುದಾಗಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಆದಾಗ್ಯೂ ಅವರ ಬಗ್ಗೆ ಸಂಶಯ ಬರುವಂತೆ ಮಾತನಾಡುತ್ತಿರುವುದು ಖಂಡನೀಯ ಎಂದು ಜಿಪಂ ಸದಸ್ಯೆ ಕಸ್ತೂರಿ ಅಷ್ಟಗಿ, ಪರಮೇಶ್ವರ ದಂಡಿನ, ಶಿವಾನಂದ ಕವಳಿ, ಬಸವರಾಜ ಕುಂದಗೋಳ, ಶ್ರೀನಿವಾಸ ಕೋಟ್ಯಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.