ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 18 Oct 2013, 11:35 am

ಕುಂದಗೋಳ: ಶರಣರ ಚಿಂತನ ಗೋಷ್ಠಿ ಇಂದು
ಕುಂದಗೋಳ: ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಶ್ರೀ ಬಸವಣ್ಣಜ್ಜನವರ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಆಶ್ರಯದಲ್ಲಿ ಅ. 18ರಂದು ಸಂಜೆ 6ಕ್ಕೆ ಶರಣರ ಚಿಂತನ ಗೋಷ್ಠಿ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಬಸವಣ್ಣಜ್ಜನವರ ಕಲ್ಯಾಣಪುರ ಇವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಚಿಂತನಗೋಷ್ಠಿಯ ದಿವ್ಯ ಸಾನ್ನಿಧ್ಯವನ್ನು ಕುಂದಗೋಳ ಕಲ್ಯಾಣಪುರ ಮಠದ ತ್ರಿವಿಧ ದಾಸೋಹಿ ಬಸಯ್ಯಜ್ಜನವರು ವಹಿಸುವರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಡಿ. ಘೋರ್ಪಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸಕರಾಗಿ ಶಾಂತಾ ಹೂಗಾರ, ಶರಣರ ದೃಷ್ಟಿಯಲ್ಲಿ ಸಮಾನತೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಐ.ಎಸ್. ಬಂಡಿವಾಡ, ಚಿಕ್ಕನರ್ತಿ ಗ್ರಾಪಂ ಸದಸ್ಯ ಅಂದಾನಗೌಡ ಪಾಟೀಲ, ರೋಟರಿ ಸಂಸ್ಥೆಯ ಅಶೋಕ ಪಾಳಂದೆ, ಪದವೀಧರ ಸಂಘದ ರಾಜ್ಯಾಧ್ಯಕ್ಷ ಎಸ್.ವೈ. ಸೊರಟಿ, ಪತ್ರಕರ್ತ ಗಂಗಾಧರ ಡಾಂಗೆ ಭಾಗವಹಿಸಲಿದ್ದಾರೆ ಎಂದು ಪರಿಷತ್ ಕಾರ್ಯದರ್ಶಿ ಎಸ್.ಸಿ. ಶ್ಯಾನವಾಡ ತಿಳಿಸಿದ್ದಾರೆ.
ಇಂದು ವಾಲ್ಮೀಕಿ ಜಯಂತಿ
ಕುಂದಗೋಳ: ಪಟ್ಟಣದ ಶ್ರೀ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಅ. 18ರಂದು ಬೆಳಗ್ಗೆ 9.30ಕ್ಕೆ ತಾಲೂಕು ಆಡಳಿತ, ತಾಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತದೆ. ಶಾಸಕ ಸಿ.ಎಸ್. ಶಿವಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅಥಿತಿಗಳಾಗಿ ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ವೀರಣ್ಣ ಮತ್ತಿಗಟ್ಟಿ, ಬಸವರಾಜ ಹೊರಟ್ಟಿ, ನಾಗರಾಜ ಛಬ್ಬಿ, ಜಿಪಂ ಅಧ್ಯಕ್ಷ ಶಂಕ್ರಪ್ಪ ಅಗಡಿ, ಉಪಾಧ್ಯಕ್ಷ ಫಕ್ಕಿರಪ್ಪ ಜಕ್ಕಣ್ಣವರ, ಜಿಪಂ ಸದಸ್ಯರಾದ ವೆಂಕನಗೌಡ ಹಿರೇಗೌಡ್ರ, ಮಮತಾಜಬಿ ನದಾಫ್, ನಿರ್ಮಲಾದೇವಿ ಉಪ್ಪಿನ, ಪ್ರೇಮಾ ಕೊಬ್ಬಯ್ಯನವರ, ತಾಪಂ ಅಧ್ಯಕ್ಷರಾದ ಅಂಬವ್ವ ಪಾಟೀಲ, ಉಪಾಧ್ಯಕ್ಷ ಚಂದ್ರಶೇಖರ ಬೀಸೆರೊಟ್ಟಿ, ಈ ಸಂದರ್ಭದಲ್ಲಿ ಉಪನ್ಯಾಸಕರಾಗಿ ಡಾ. ಗೀತಾಂಜಲಿ ಕುರಡಗಿ ಆಗಮಿಸಲಿದ್ದಾರೆ. ಜಯಂತಿ ಕಾರ್ಯಕ್ರಮದಲ್ಲಿ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹರೀಶ ಜಗದನ್ನವರ
ಧಾರವಾಡ: ತಾಲೂಕಿನ ಗರಗ ಗ್ರಾಮದ ಹರೀಶ ಜಗದನ್ನವರ (19) ಗುರುವಾರ ಆಕಸ್ಮಿಕವಾಗಿ ನಿಧನ ಹೊಂದಿದ್ದಾರೆ. ಮೃತರಿಗೆ ತಂದೆ-ತಾಯಿ, ಇಬ್ಬರು ಸಹೋದರಿಯರು ಇದ್ದಾರೆ.
ಯಲ್ಲವ್ವ ತಿಪ್ಪಣ್ಣ ಮೆಣಸಗಿ
ನವಲಗುಂದ: ಸ್ಥಳೀಯ ಜಾಡರ ಓಣಿ ನಿವಾಸಿ ಯಲ್ಲವ್ವ ತಿಪ್ಪಣ್ಣ ಮೆಣಸಗಿ (75) ಗುರುವಾರ ನಿಧನರಾದರು. ಮೃತರಿಗೆ ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement