ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಡಾ. ವೀರೇಂದ್ರ ಹೆಗ್ಗಡೆ ತೇಜೋವಧೆ ಖಂಡನೀಯ

Mainashree
Updated On : 19 Oct 2013, 11:23 am

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 18
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಅಪಮಾನವಾಗುವಂಥ ಹಾಗೂ ಜನರ್ನ ದಾರಿ ತಪ್ಪಿಸುವ ಕೆಲಸವನ್ನು ಕೆಲವು ವಿದ್ಯುನ್ಮಾನ ಪ್ರಚಾರ ಮಾಧ್ಯಮಗಳು ಹಾಗೂ ಕೆಲ ವ್ಯಕ್ತಿಗಳು ಮಾಡುತ್ತಿರುವುದು ಖಂಡನೀಯ ಎಂದು ಜೈನ್ ಮಿಲನ್ ಧಾರವಾಡ ಘಟಕದ ಅಧ್ಯಕ್ಷ ಡಾ. ಎ.ಬಿ. ಖೋತ್ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಧಾರವಾಡ ಜೈನ್ ಮಿಲನ್ ಮಹಾಸಭೆಯಲ್ಲಿ ಮಾತನಾಡಿದ ಅವರು, ಜನಮಾನಸದ ನಡುವೆ ಸತ್ಯದ ಹಾದಿ ತೋರಿಸುವ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಂಧಕಾರದ ಹಾದಿಯಲ್ಲಿ ನಡೆಯುವವರಿಗೆ ದಾರಿ ದೀಪದಂತಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲೇ ಶ್ರೀಕ್ಷೇತ್ರ ಧರ್ಮಸ್ಥಳದ ಅಧಿಕಾರ ವಹಿಸಿ ಕ್ಷೇತ್ರದ ಸೇವೆಯನ್ನು ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಅಭಿವೃದ್ಧಿಯೊಂದಿಗೆ ಭಕ್ತವೃಂದದಲ್ಲಿ ಅಪಾರ ಪ್ರೀತಿ, ವಿಶ್ವಾಸ ಗಳಿಸಿಕೊಂಡಿದ್ದಾರೆ ಎಂದರು.
ಕಳೆದ ಹಲವು ದಿನಗಳಿಂದ ಅವ್ಯಾಹತವಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ಹಾಗೂ ಡಾ. ವೀರೇಂದ್ರ ಹೆಗ್ಗಡೆಯವರ ಹೆಸರನ್ನು ದುರ್ಬಳಕೆ ಮಾಡಿ ಅವಮಾನಿಸಿರುವುದು ಮಾತ್ರವಲ್ಲದೆ ಕ್ಷೇತ್ರದ ಭಕ್ತಾದಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ತೇಜೋವಧೆ ಮಾಡುತ್ತಿರುವುದು ಖೇದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆ. ಜಯಕೀರ್ತಿ ಜೈನ್, ಅಶೋಕ ಬಾಗಿ, ಅರುಣಾ ಬ್ಯಾಡಗಿ, ರವಿರಾಜ್ ಕೆ., ದತ್ತಾಡೋರ್ಲೆ, ಪಾರ್ಶ್ವನಾಥ ಶೆಟ್ಟಿ, ಸುಮನಾ ವಜ್ರಕುಮಾರ, ವಾಣಿಶ್ರೀ ಪ್ರಸಾದ ಹಾಗೂ ಮಿಲನದ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement