ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೈತಿಕತೆಯೇ ಶಿಕ್ಷಣದ ಬುನಾದಿ: ಗಾಂವಕರ್

Mainashree
Updated On : 19 Oct 2013, 11:21 am

ಹುಬ್ಬಳ್ಳಿ: ನೈತಿಕತೆಯೇ ಶಿಕ್ಷಣದ ಬುನಾದಿ ಆಗಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ದೇವಾನಂದ ಗಾಂವಕರ್ ಸಲಹೆ ನೀಡಿದ್ದಾರೆ.
ನಗರದ ಕೆಎಲ್‌ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ 2012-13ರ ಶೈಕ್ಷಣಿಕ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ವ್ಯಾಪಕ ಮತ್ತು ವಿಸ್ತೃತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ. ಎಸ್.ಎಸ್. ದೇಸಾಯಿ, ವಿದ್ಯಾರ್ಥಿಗಳು ಸತತ ಪ್ರಯತ್ನ ಮತ್ತು ತಾಳ್ಮೆಯಂಥ ಗುಣ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಿಂದ ಮೈಗೂಡಿಸಿಕೊಳ್ಳುವ ಇಂಥ ಗುಣಗಳಿಂದಾಗಿ ಭವಿಷ್ಯ ಉತ್ತಮಗೊಳ್ಳುವುದು ಎಂದರು.  
ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಡಾ. ಬಿ.ಸಿ. ಪಾಟೀಲ, ಎ.ಸಿ. ಪ್ರತಿಭಾ, ಡಾ. ಎಂ.ಜಿ. ಸಜ್ಜನ್ ಮತ್ತಿತರರು ಉಪಸ್ಥಿತರಿದ್ದರು.
ಆಶಾ ನಾಯಕ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ. ಜಯಶ್ರೀ ಕುಂದಗೋಳ ಪರಿಚಯಿಸಿದರು. ಡಾ. ಲಿಂಗರಾಜ ಮುಳ್ಳಳ್ಳಿ ನಿರೂಪಿಸಿದರು. ದಶವಂತಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement