ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪಾಲಿಕೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

Mainashree
Updated On : 19 Oct 2013, 11:21 am

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ಪಾಲಿಕೆ ಕಚೇರಿಯಲ್ಲಿ ವಾಲ್ಮೀಕಿ ಅವರ ಜಯಂತಿ ಆಚರಿಸಲಾಯಿತು. ಮಹಾನಗರ ಪಾಲಿಕೆ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ ಅವರು ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಯಂತಿ ನಿಮಿತ್ತ ಆಯೋಜಿಸಿದ್ದ ಉಪನ್ಯಾಸದಲ್ಲಿ ಆರೂರು ಲಕ್ಷ್ಮಣಶೇಟ್ ಅವರು, ಲವ ಕುಶರಿಗೆ ವಾಲ್ಮೀಕಿ ಹೇಳಿದ ಪಾಠ, ಸಾಂಸ್ಕೃತಿಕ ಶ್ಲೋಕ, ವಾಲ್ಮೀಕಿಯ ಹೆಸರು ಬಂದ ರೀತಿ ವಿವರಿಸಿದರು. ಲಕ್ಷ್ಮಣ ಬೀಳಗಿ ಅವರು ಸಜ್ಜನರ ಸಹವಾಸದಿಂದ ಜನರು ಉದ್ಧಾರವಾಗುತ್ತಾರೆ ಎನ್ನುವುದಕ್ಕೆ ವಾಲ್ಮೀಕಿ ಅವರ ಜೀವನ ವೃತ್ತಾಂತ ಬಹು ದೊಡ್ಡ ಸಾಕ್ಷಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ ವಾಲ್ಮೀಕಿಯ ತತ್ವ, ಸಿದ್ಧಾಂತದ ಕುರಿತು ಮಾತನಾಡಿದರು. ಪಾಲಿಕೆ ವಿಶೇಷ ಅಧಿಕಾರಿ ಎಸ್.ಎಚ್. ನರೇಗಲ್, ಗಾಳೇಮ್ಮನವರ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement