ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ತವರಿನಲ್ಲಿ ಮಂಜುಳಾಗೆ ಸನ್ಮಾನ

Mainashree
Updated On : 20 Oct 2013, 12:55 pm

ಧಾರವಾಡ: ಇತ್ತೀಚೆಗೆ ಸ್ವಿಟ್ಜರ್ಲಾಂಡಿನ ಜಿನಿವಾ ನಗರದಲ್ಲಿ ನಡೆದ 66ನೇ ವಿಶ್ವ ಮಕ್ಕಳ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮಂಜುಳಾ ಮಹಾಂತೇಶ ಮುನವಳ್ಳಿಗೆ ಅವರಿಗೆ ತಾಲೂಕಿನ ರಾಮಾಪುರ ಗ್ರಾಮದಲ್ಲಿ ಸನ್ಮಾನಿಸಲಾಯಿತು.
ಗ್ರಾಮದ ಗೆಳೆಯರ ಬಳಗ, ಸಾರ್ವಜನಿಕ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಚಿಕ್ಕ ವಯಸ್ಸಿನಲ್ಲಿ ಭಾರತದ ಮಕ್ಕಳ ಹಕ್ಕುಗಳ ಸ್ಥಿತಿಗತಿಗಳ ಬಗ್ಗೆ ಹೊರದೇಶದಲ್ಲಿ ವಿಷಯ ಮಂಡಿಸಿ ಗ್ರಾಮಕ್ಕೆ ಮಾತ್ರವಲ್ಲ ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆ ತಂದ ಮಂಜುಳಾಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶಂಭನಗೌಡ ಪಾಟೀಲ ಮಾತನಾಡಿ, ಹಳ್ಳಿಯಲ್ಲಿ ಹುಟ್ಟಿ ಮಕ್ಕಳ ಹಕ್ಕುಗಳ ಬಗ್ಗೆ ದೇಶ ಹಾಗೂ ಹೊರ ದೇಶದಲ್ಲಿಯೂ ಜಾಗೃತಿ ಮೂಡಿಸಿದ್ದಲ್ಲದೇ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಮಂಜುಳಾ ಸಾಧನೆ ಶ್ಲಾಘನೀಯ. ಮಂಜುಳಾ ಸಮಾಜದಲ್ಲಿರುವ ಅನೇಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡುವ ಮೂಲಕ ಸಮಾಜದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಸಚಿವ ಸಂತೋಷ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ, ಗ್ರಾಪಂ ಮಾಜಿ ಅಧ್ಯಕ್ಷ ಪುಂಡಲಿಕ ಪವಾರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಾಂಡುರಂಗ ಹಟ್ಟಿ, ಕಿಡ್ಸ್ ಸಂಸ್ಥೆ ಅಧಿಕಾರಿ ಚಂದ್ರಕಾಂತ, ಮುಖ್ಯೋಪಾಧ್ಯಾಯ ಎಸ್. ಪಾರ್ವತೆವ್ವ, ಗ್ರಾಪಂ ಸದಸ್ಯ ಕರೆಪ್ಪ ಜೋಗಾಡಿ, ಎಸ್‌ಡಿಎಂಸಿ ಅಧ್ಯಕ್ಷ ಮಡಿವಾಳಪ್ಪ ಕುರಬರ, ಭೀಮಪ್ಪ ಬಡಿಗೇರ, ತಿಪ್ಪಣ್ಣ ಕಾಳನಾಯ್ಕರ್, ಮಡಿವಾಳಪ್ಪ ಪವಾರ, ಈರಪ್ಪ ಅಂಬ್ಲಿ, ವಸಂತಗೌಡ ಪಾಟೀಲ, ಮಂಜುನಾಥ ಮಲ್ಲಿಗವಾಡ, ಶಿವನಗೌಡ ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement