ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ಎನ್ನೆಸ್ಸೆಸ್ ಶಿಬಿರ ಉದ್ಘಾಟನೆ

Mainashree
Updated On : 21 Oct 2013, 10:24 am

ಅಣ್ಣಿಗೇರಿ: ಸಮೀಪದ ಮಣಕವಾಡ ಗ್ರಾಮದಲ್ಲಿ ಸ್ಥಳೀಯ ಅಮೃತೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎನ್‌ಎಸ್‌ಎಸ್ ಶಿಬಿರದ ಉದ್ಘಾಟನೆ  ಸಮಾರಂಭ ಅ. 21ರಂದು ಸಂಜೆ 5 ಗಂಟೆಗೆ ಜರುಗಲಿದೆ.
ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸುವರು. ನಲವಡಿ ಗ್ರಾಪಂ ಅಧ್ಯಕ್ಷೆ ಫಕ್ಕೀರವ್ವ ಕಲ್ಲಣ್ಣವರ ಅಧ್ಯಕ್ಷತೆ ವಹಿಸುವರು. ಜಿಪಂ ಸದಸ್ಯ ಸುರೇಶ ಚ. ಗಾಣಿಗೇರ ಶಿಬಿರವನ್ನು ಉದ್ಘಾಟಿಸುವರು.
2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ನವೋದಯ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಶ್ರೀದೇವಿ ಶಿ. ಜಡಿಯವರ ಅವರನ್ನು ಇದೇ ವೇಳೆ ಸನ್ಮಾನಿಸಲಾಗುವುದು. ಅ. 21ರಿಂದ ಅ. 27ರ ವರೆಗೆ ನಡೆಯುವ ಶಿಬಿರದ ನಿಮಿತ್ತ ವಿವಿಧ ವಿಷಯಗಳ ಕುರಿತು ಉಪನ್ಯಾಸಗಳು ಜರುಗಲಿವೆ.
ಅತಿಥಿಗಳಾಗಿ ನಲವಡಿ ಗ್ರಾಪಂ ಸದಸ್ಯರು, ನವಲಗುಂದ ತಾಪಂ ಸದಸ್ಯರು. ಅಮೃತೇಶ್ವರ ಶಿಕ್ಷಣ ಸಂಸ್ಥೆಯ ಚೇರ್‌ಮನ್, ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯ ಎನ್.ಜಿ  ಗದ್ದಿಗೌಡರ, ಉಪಪ್ರಾಚಾರ್ಯ ಎಸ್.ಬಿ. ಅಗಸಿಮನಿ ಆಗಮಿಸುತ್ತಾರೆಂದು ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಎನ್.ಜಿ. ಸೊಟಕನಾಳ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement