ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರಧಾನಿ ಸಿಂಗ್ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Mainashree
Updated On : 21 Oct 2013, 10:26 am

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 20
ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಕಳೆದ ಒಂಭತ್ತು ವರ್ಷಗಳಿಂದ ನಡೆಸುತ್ತಿರುವ ಹಗರಣಗಳ ಬಗ್ಗೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ವಿವೇಕಾನಂದ ವೃತ್ತದ ಬಳಿ ಶನಿವಾರ ಪ್ರತಿಭಟನೆ ನಡೆಸಿ ಪ್ರಧಾನಿ ಪ್ರತಿಕೃತಿ ದಹನ ಮಾಡಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯುಪಿಎ ಸರ್ಕಾರ ಬರಿ ಹಗರಣಗಳಲ್ಲಿ ಮುಳುಗಿದ್ದು, ದಿನಕ್ಕೊಂದು ಅಚ್ಚರಿ ಹಗರಣಗಳು ಬೆಳಕಿಗೆ ಬರುತ್ತಿದೆ. 2ಜಿ ಹಗರಣ, ಕಾಮನ್ವೆಲ್ತ್ ಕ್ರೀಡಾಕೂಟ ವೆಚ್ಚದಲ್ಲಿ ಹಗರಣ, ಬೋ ಫೋರ್ಸ್ ಮತ್ತು ಕಲ್ಲಿದ್ದಲು ಹಂಚಿಕೆಯಲ್ಲಿ ದೊಡ್ಡ ಮಟ್ಟದ ಹಗರಣಗಳು ನಡೆದಿವೆ. ಅಲ್ಲದೆ, ಕಲ್ಲಿದ್ದಲು ಹಗರಣದಲ್ಲಿ ಪ್ರಧಾನಿ ಅವರ ಹೆಸರು ಕೇಳಿಬಂದಿರುವುದು ದೇಶಕ್ಕೆ ಕಳಂಕ ತರುವಂತಹ ಸಂಗತಿ. ಆದ್ದರಿಂದ ಪ್ರಧಾನಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಮೋಹನ ರಾಮದುರ್ಗ, ಹೇಮರಾಜ ಭಂಡಾರಿ, ಬಸವರಾಜ ಬೆಣ್ಣಿ, ಭೀಮಸಿ ನೆಮಿಕಲ್, ಪ್ರಹ್ಲಾದ ರಾಯಕರ, ಭೀಮು ಸವಣೂರು, ನಾಗರಾಜ ನಾಯಕ, ಪ್ರಮೋದ ಕಾರಕೂನ, ನಾಗರಾಜ ಹುಣಸೀಕಟ್ಟಿ, ಗೌಡಪ್ಪ ಪಾಟೀಲ, ಸಂತೋಷ ನಾಗಮ್ಮನವರ, ಸುನೀಲ ಸಂಡೂರು, ಸಂತೋಷ ಸವಣೂರು, ಸುಭಾಷಚಂದ್ರ ಹೊನ್ನಾವರ, ರುದ್ರಯ್ಯ ಹಿರೇಮಠ, ರಾಜೇಶ ಚಾಂದಗುಡಿ, ವಿಶ್ವನಾಥ ಚಕ್ರಪಾಣಿ, ಸುನೀಲ ಹಂಗರಗಿ, ಗೀತಾ ಪಾಟೀಲ, ರಾಜೇಶ್ವರಿ ಸಾಲಗಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement