ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮರಳಿಗೆ ವೈಜ್ಞಾನಿಕ ದರಪಟ್ಟಿ ಸಿದ್ಧಪಡಿಸಿ

Mainashree
Updated On : 21 Oct 2013, 10:25 am

ಧಾರವಾಡ: ವೈಜ್ಞಾನಿಕ ದರಪಟ್ಟಿ ನಿರ್ಧಾರ, ನಿಗದಿತ ಜಾಗದಿಂದ ಮರಳು ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜಿಲ್ಲಾ ಗುತ್ತಿಗೆದಾರರ ಸಂಘದ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಗುತ್ತಿಗೆದಾರರ ದರಪಟ್ಟಿ ತಯಾರಿಸುವಾಗ ಮಾರುಕಟ್ಟೆಯಲ್ಲಿ ಕಚ್ಚಾ ಸಾಮಗ್ರಿ ದರಗಳನ್ನು ಅಭ್ಯಸಿಸಿ ವೈಜ್ಞಾನಿಕ ದರಪಟ್ಟಿ ಸಿದ್ಧಪಡಿಸಬೇಕು. ದರಪಟ್ಟಿ ನಿರ್ಧರಿಸುವ ಸಮಿತಿಯಲ್ಲಿ ಗುತ್ತಿಗೆದಾರರ ಪ್ರತಿನಿಧಿಗಳಿರಬೇಕು. ಕಾಮಗಾರಿಗಳಿಗೆ ಬೇಕಾಗುವ ಮರಳು ಪಡೆಯಲು ಸರ್ಕಾರಿ ಜಮೀನು ಗುರುತಿಸಿ ಅದರಿಂದ ಗುತ್ತಿಗೆದಾರರಿಗೆ ಮರಳು ಪೂರೈಸುವಂತೆ ಇಲಾಖೆ ಅಧಿಕಾರಿಗಳಿಗೆ ಆದೇಶಿಸಬೇಕು. ಕಾಮಗಾರಿಗೆ ಪೂರ್ಣ ಹಣ ಇದ್ದರೆ ಮಾತ್ರ ಟೆಂಡರ್ ಕರೆಯಬೇಕು. ಅಲ್ಲದೇ ಟೆಂಡರ್ ಅವಧಿ ನಿರ್ಧರಿಸುವಾಗ ಟೆಂಡರ್ ಮೊತ್ತ, ಕಾಮಗಾರಿಯ ಸ್ಥಳ, ಕಚ್ಚಾ ಸಾಮಗ್ರಿ ಲಭ್ಯತೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಕಾಮಗಾರಿ ನಿರ್ವಹಿಸುವ ಅವಧಿ ನಿರ್ಧರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದ ಪ್ರಮಾಣಪತ್ರವನ್ನು ಅವರ ಜೀವಿತಾವಧಿಯ ಯಾವುದೇ ಟೆಂಡರ್ ಅಂದರೆ ಐದು ವರ್ಷಗಳ ನಂತರವೂ ಸಹಿತ ಪರಿಗಣಿಸಬೇಕು. ಗುತ್ತಿಗೆದಾರರ ಬಿಲ್ಲಿನಲ್ಲಿ ಕಟಾಯಿಸಿದ ಗುತ್ತಿಗೆದಾರರ ಕ್ಷೇಮನಿಧಿ ಹಣವನ್ನು ಈಗ ಗುತ್ತಿಗೆದಾರರು ಮೃತಪಟ್ಟರೆ ಮಾತ್ರ ನೀಡುತ್ತಾರೆ. ಆದರೆ, ಗುತ್ತಿಗೆದಾರರು ಅಪಘಾತದಲ್ಲಿ ಅಥವಾ ಇನ್ನಿತರ ಕಾಯಿಲೆಯಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಸಂದರ್ಭದಲ್ಲಿ ಅವರ ಆಸ್ಪತ್ರೆಯ ಖರ್ಚನ್ನು ಈ ಹಣದಿಂದಲೇ ಭರಿಸುವಂತಾಗಬೇಕು ಎಂದು ಅಸೋಸಿಯೇಶನ್ ಅಧ್ಯಕ್ಷ ಸುಭಾಷ ಪಾಟೀಲ, ಸಿ.ಬಿ. ಮೊರಬದ, ನಿಂಗಪ್ಪ ಕರೀಕಟ್ಟಿ, ಮಲ್ಲಿಕಾರ್ಜುನ ಆಯಟ್ಟಿ, ಪ್ರಭಾವತಿ ವಡ್ಡೀನ, ಶ್ರೀಧರ ರೆಡ್ಡಿ ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement