ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ಪ್ರಥಮ ವಾರ್ಷಿಕೋತ್ಸವ

Lingaraj Badiger
Updated On : 22 Oct 2013, 10:59 am

ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದ ಶ್ರೀ ಕರಿಯಮ್ಮಾದೇವಿ ದೇವಸ್ಥಾನದಲ್ಲಿ ಅ. 22ರಂದು ಬೆಳಗ್ಗೆ 8ಕ್ಕೆ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಪ್ರಥಮ ವಾರ್ಷಿಕೋತ್ಸವ ನಡೆಯಲಿದೆ. ವಾರ್ಷಿಕೋತ್ಸವ ನಿಮಿತ್ತ ದೇವಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಯಲಿದ್ದು, ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ನೆರವೇರಲಿದೆ. ಸುತ್ತಲಿನ ಬಡಾವಣೆಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಇಂದು ಜನಪದ ಸಾಹಿತ್ಯ ಉಪನ್ಯಾಸ
ಕಲಘಟಗಿ: ತಾಲೂಕಿನ ಬೇಗೂರ ಗ್ರಾಮದಲ್ಲಿ ಅ. 22ರ ಸಂಜೆ 4ಕ್ಕೆ ಜನಪದ ಸಾಹಿತ್ಯಕ್ಕೆ ಗ್ರಾಮೀಣರ ಕೊಡುಗೆ ಕುರಿತು ಉಪನ್ಯಾಸ ನಡೆಯಲಿದೆ. ಸ್ಥಳೀಯ ಗುಡ್‌ನ್ಯೂಸ್ ಶಾಲೆ, ಸ್ವಾತಂತ್ರ ಪದವಿಪೂರ್ವ ಮಹಾವಿದ್ಯಾಲಯ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ಶಿಬಿರದ ಈ ಕಾರ್ಯಕ್ರಮದಲ್ಲಿ ಪ್ರೊ. ಜಿ.ಆರ್. ಸುಳೇಬಾವಿ ಅವರು ಉಪನ್ಯಾಸ ನೀಡುವರು. ಕಲ್ಲಪ್ಪ ಎಸ್. ಮೇಟಿ, ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಂಕ್ರಪ್ಪ ಧನಿಗೊಂಡ, ಎಂ.ಆರ್. ಪಾಟೀಲ, ಈರಪ್ಪ ಗಂಜೀಗಟ್ಟಿ, ಬಸಪ್ಪ ಮುಕ್ಕಲಗಟ್ಟಿ, ಮಲ್ಲೇಶಪ್ಪ ಧನಿಗೊಂಡ ಉಪಸ್ಥಿತರಿರುವರು ಎಂದು ಕೆ.ಜಿ. ರಪಾಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕಸಾಪ ತಿರ್ಲಾಪುರ ಗ್ರಾಮ ಘಟಕ ಉದ್ಘಾಟನೆ
ನವಲಗುಂದ: ಕನ್ನಡ ಸಾಹಿತ್ಯ ಪರಿಷತ್ತು ತಿರ್ಲಾಪುರ ಗ್ರಾಮ ಘಟಕದ ಉದ್ಘಾಟನಾ ಸಮಾರಂಭ ಅ. 23ರಂದು ಗ್ರಾಪಂ ಆವರಣ ತಿರ್ಲಾಪುರದಲ್ಲಿ ಜರುಗುವುದು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎ.ಬಿ. ಹಿರೇಮಠ, ಆರ್.ಎಚ್. ಈರಡ್ಡಿ, ಆರ್.ಎಸ್. ಗುರುಮಠ ಆಗಮಿಸಲಿದ್ದಾರೆ. ಅಧ್ಯಕ್ಷತೆ ತಿರ್ಲಾಪುರ ಗ್ರಾಪಂ ಅಧ್ಯಕ್ಷರು ಸರೋಜಿನಿ ಕಾಲವಾಡ ವಹಿಸಲಿದ್ದು, ಧಾರವಾಡ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರು ಲಿಂಗರಾಜ ಅಂಗಡಿ ಕಾರ್ಯಕ್ರಮ ಉದ್ಘಾಟಿಸುವರು. ಧಾರವಾಡ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರು ಶ್ರೀಶೈಲ ಹುದ್ದಾರ ನಮ್ಮ ಹಳ್ಳಿಗಳು, ಜಾನಪದ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡುವರು.
24, 25ರಂದು ಕವಿವಿ ಯುವಜನೋತ್ಸವ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ 5ನೇ ಯುವಜನೋತ್ಸವವನ್ನು ಅ. 24 ಮತ್ತು 25ರಂದು ವಿವಿ ಆವರಣದಲ್ಲಿ ಏರ್ಪಡಿಸಲಾಗಿದೆ. ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ, ಸ್ನಾತಕೋತ್ತರ ಕೇಂದ್ರಗಳಲ್ಲಿ, ಸಂಲಗ್ನ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಓದುತ್ತಿರುವ ಪಿ.ಜಿ. ವಿದ್ಯಾರ್ಥಿಗಳು ಈ ಯುವಜನೋತ್ಸವದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗೆ, ಜಿಮಖಾನಾ ಅಧ್ಯಕ್ಷರು - 94483 24151 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ನಾಳೆ ನೇತ್ರ ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರ
ನವಲಗುಂದ: ಲಿಂ. ಶರಣ ಬಿ.ಎಂ. ಪಾಟೀಲ ಅಡ್ನೂರ ಅವರ 22ನೇ ಪುಣ್ಯಸ್ಮರಣೆ ಅಂಗವಾಗಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಅ. 23ರ ಬೆಳಗ್ಗೆ 10-30ಕ್ಕೆ ಸ್ಥಳೀಯ ಅಡ್ನೂರಿನ ದಾಸೋಹ ಮಠದ ಆವರಣದಲ್ಲಿ ಬಿ.ಎಂ. ಪಾಟೀಲ(ಅಡ್ನೂರ) ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ, ನವಲಗುಂದ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಧಾರವಾಡ ಹಾಗೂ ವಿಜನ್ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಖ್ಯಾತ ನೇತ್ರ ತಜ್ಞರಿಂದ ಅ. 23ರಂದು ಚಿಕಿತ್ಸೆ ನಂತರ ವಿಜನ್ ಕಣ್ಣಿನ ಆಸ್ಪತ್ರೆ, ಕಾರವಾರ ರಸ್ತೆ ಹುಬ್ಬಳ್ಳಿಯಲ್ಲಿ ಅ 24ರಂದು ಗುರುವಾರ ಉಚಿತ ನೇತ್ರ ಚಿಕಿತ್ಸೆ ಜರುಗಲಿದ್ದು, ತಾಲೂಕಿನ ಜನರು ಉಚಿತ ನೇತ್ರ ತಪಾಸಣೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಿದ್ದನಗೌಡ ಪಾಟೀಲ: 9448801062, ಲೋಕನಾಥ ಹೆಬಸೂರ: 9242164890. ಸಿಕಂದರ ಕಾಲಾರಿ: 9845617364. ಇವರನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement