ಓದಿನ ಜೊತೆ ಸಮಾಜ ಸೇವೆ ಮಾಡಿ
ಗುಡಗೇರಿ: ವಿದ್ಯಾರ್ಥಿಗಳು ಓದಿನ ಜೊತೆಗೆ ಸಮಾಜ ಸೇವೆಗಳಲ್ಲಿ ಪಾಲ್ಗೊಳ್ಳಬೇಕೆಂದು ಜಿಪಂ ಸದಸ್ಯ ವೆಂಕನಗೌಡ ಹಿರೇಗೌಡ್ರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಕುಂದಗೋಳ ತಾಲೂಕಿನ ರಟ್ಟಿಗೇರಿ ಗ್ರಾಮದಲ್ಲಿ ಗುಡಗೇರಿ ಗ್ರಾಮದ ಫ.ಚ.ಮ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಸಕ್ತ ವರ್ಷದ ಎನ್‌ಎಸ್‌ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಎನ್.ಎಚ್. ಮಾಯಕೊಂಡ ಮಾತನಾಡಿದರು. ಗೌಡಗೇರಿ ಗ್ರಾಪಂ ಅಧ್ಯಕ್ಷೆ ಬಸಮ್ಮ ಅಂಗಡಿ, ದೇವಪ್ಪ ಗೌಡಗೇರಿ, ಗದಿಗೆಪ್ಪ ದಳಪತಿ, ನೀಲಪ್ಪ ಗುಡೇನಕಟ್ಟಿ, ವಿಜಯಕುಮಾರ ಹಾಲಿ, ಪಿಎಸ್‌ಐ ಸುರೇಶ ಗಡ್ಡಿ, ದಯಾನಂದ ಕುಂದೂರ, ಹನುಮಂತಪ್ಪ ಕಂಬಳಿ ಪಾಲ್ಗೊಂಡಿದ್ದರು. ಮಂಜುನಾಥ ಕೊಕ್ಕರಗುಂದಿ ನಿರೂಪಿಸಿದರು. ಬಿ.ಎಂ. ಮರಳಿಹಳ್ಳಿ ವಂದಿಸಿದರು.