ಬಿಜೆಪಿ ಪದಾಧಿಕಾರಿಗಳ ನೇಮಕ
ಧಾರವಾಡ: ಬಿಜೆಪಿ ಗ್ರಾಮಾಂತರ ಜಿಲ್ಲೆಯ ಯುವ ಮೋರ್ಚಾ ನೂತನ ಪದಾಧಿಕಾರಿಗಳನ್ನು ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್. ಪಾಟೀಲ ಆಯ್ಕೆ ಮಾಡಿದ್ದಾರೆ. ಮಲ್ಲನಗೌಡ ಪಾಟೀಲ (ಅಧ್ಯಕ್ಷ), ಜಗದೀಶ ಹಂದಿಗೋಳ, ಗದ್ದೆಪ್ಪಗೌಡ ಕಂತಿಗೌಡರ, ಅರುಣ ಅಳವಂಡಿ, ಈರಣ್ಣ ಚವಡಿ, ಕಲ್ಮೇಶ ಬೇಲೂರ (ಉಪಾಧ್ಯಕ್ಷರು), ಗುರುಪಾದಗೌಡ ಹನುಮಂತಗೌಡರ, ಸಂಭಾಜಿ ಜಾಧವ (ಪ್ರಧಾನ ಕಾರ್ಯದರ್ಶಿಗಳು), ಶಂಕರ ಕುಮಾರದೇಸಾಯಿ, ಶಿವಾನಂದ ಹಾಳದೊಟರ, ಆರೂಢ ಬುಗಡಿ, ಶಿವಬಸಯ್ಯ ಹುರಳಕುಪ್ಪಿಮಠ, ಡಾ. ಗಿರೀಶ ಮಲ್ಲಾಪುರ (ಕಾರ್ಯದರ್ಶಿಗಳು) ಮತ್ತು ಬಸನಗೌಡ ಕರೆಹೊಳ್ಳಪ್ಪನವರ (ಕೋಶಾಧ್ಯಕ್ಷ) ಆಯ್ಕೆಯಾಗಿದ್ದಾರೆಂದು ಪ್ರಧಾನ ಕಾರ್ಯದರ್ಶಿ ಈರಣ್ಣ ಜಡಿ ತಿಳಿಸಿದ್ದಾರೆ.
ಉಚಿತ ಇಂಗ್ಲಿಷ್ ಸಂವಹನ ತರಬೇತಿ
ಧಾರವಾಡ: ನಗರದ ಕರ್ನಾಟಕ ಕಂಪ್ಯೂಟರ್ ಶಿಕ್ಷಣ ಕೇಂದ್ರ ದೀಪಾವಳಿ ನಿಮಿತ್ತ ಅ. 26ರಿಂದ 45 ದಿನ ಉಚಿತ ಇಂಗ್ಲಿಷ್ ಸಂವಹನ ತರಬೇತಿ, ವ್ಯಾಕರಣ ತರಬೇತಿ ಶಿಬಿರ ಏರ್ಪಡಿಸಿದೆ. ತರಬೇತಿ ಬಯಸುವವರಿಗೆ ವಯಸ್ಸಿನ ನಿರ್ಬಂಧವಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ. 98861-62446 ಗೆ ಸಂಪರ್ಕಿಸಬಹುದೆಂದು ಭೀಮನಗೌಡ ಪಾಟೀಲ ತಿಳಿಸಿದ್ದಾರೆ.
ಇದ್ದೂ ಇಲ್ಲದಂತಿರುವ ಎಟಿಎಂಗಳು
ಕಲಘಟಗಿ: ಪಟ್ಟಣದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಎಸ್‌ಬಿಐ ಬ್ಯಾಂಕ್‌ಗಳಲ್ಲಿನ ಎಟಿಎಂನಿಂದ ಹಣ ಪಡೆದುಕೊಳ್ಳುವ ಸೌಲಭ್ಯ ಇದ್ದೂ ಇಲ್ಲದಂತಾಗಿದೆ ಎಂದು ಗ್ರಾಹಕರು ದೂರಿದ್ದಾರೆ. ಮೇಲಿಂದ ಮೇಲೆ ಹೀಗೆ ತಾಂತ್ರಿಕ ದೋಷ, ಇನ್ನಿತರೆ ಕಾರಣಗಳಿಂದ ಎಟಿಎಂನ್ನು ನಂಬಿ ಬಂದ ಗ್ರಾಹಕರು ಅದರಲ್ಲಿ ಸೌಲಭ್ಯ ದೊರಕದೆ ತಮ್ಮ ಕೆಲಸ ಕಾರ್ಯಗಳಿಗೆ ಅಡತಡೆ ಉಂಟಾಗುತ್ತಿದೆ ಎಂದು ಗ್ರಾಹಕ ಎ.ಬಿ. ಅರ್ಕಸಾಲಿಯವರು ದೂರಿದ್ದಾರೆ. ಈ ಕುರಿತು ಹಲವಾರು ಬಾರಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಐ ಬ್ಯಾಂಕುಗಳಲ್ಲಿನ ಎಟಿಎಂ ನಂಬಿ ಬಂದ ಗ್ರಾಹಕರಿಗೆ ಕಾಲಹರಣ ಮಾಡಿದ ಬ್ಯಾಂಕಿನವರು ಅಸಮರ್ಪಕ ಉತ್ತರ ಹೇಳುತ್ತ ಹೊರಟಿದ್ದಾರೆ ಹೊರತು ಸೇವೆ ಸರಿಯಾಗಿ ದೊರಕುತ್ತಿಲ್ಲ. ಹೀಗಾದರೆ ಎಟಿಎಂ ತೆರೆದಿರುವುದಾದರೂ ಏಕೆ ಇದರಿಂದ ಗ್ರಾಹಕರ ಕೆಲಸ ಕಾರ್ಯಗಳು ನಿಗದಿತ ವೇಳೆಗೆ ಆಗದೆ ತೊಂದರೆಯಾಗುತ್ತಿದೆ. ಕೂಡಲೆ ಈ ಎಟಿಎಂ ಸಮಸ್ಯೆ ನಿವಾರಿಸಿ ಸುಗಮ ಸೇವೆ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.