ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗ್ರಾಮಾಭಿವೃದ್ಧಿಗೆ ಎನ್ನೆಸ್ಸೆಸ್ ಅವಶ್ಯ

Lingaraj Badiger
Updated On : 23 Oct 2013, 10:52 am

ಅಣ್ಣಿಗೇರಿ: ಗ್ರಾಮಾಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಆ ದಿಸೆಯಲ್ಲಿ ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಿದೆ ಎಂದು ಜಿ.ಕೆ. ಪಾಟೀಲ ಹೇಳಿದರು. ಸ್ಥಳೀಯ ಎನ್.ಎಸ್. ಹೂಗಾರ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಯಾ, ವಾಚಾ, ಮನಸ್ಸಿನಿಂದ ಮಾನವ ಅಭಿವೃದ್ಧಿ ಹೊಂದುತ್ತಾನೆ ಎಂದರು. ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಕುರಿತು ಉಪನ್ಯಾಸಕ ಬಿ.ಡಿ. ನಲವಡಿ ಮಾತನಾಡಿದರು. ಜಲ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಹನುಮಂತಗೌಡ ಹಿರೇಗೌಡ್ರ ಮಾತನಾಡಿದರು. ಈ ಸಂದರ್ಭದಲ್ಲಿ ಮರಿಯಪ್ಪ ಬನ್ನಿಗಿಡದ, ಮಹಾದೇವಪ್ಪ ನರಗುಂದ, ಫಕ್ಕೀರಯ್ಯ ಬೆನಕನಹಳ್ಳಿ, ಪ್ರಭಪ್ಪ ಗಾಣಿಗೇರ, ವೀರಭದ್ರಯ್ಯ ಹಿರೇಮಠ ಉಪಸ್ಥಿತರಿದ್ದರು. ಶ್ರುತಿ ಕಾಳಿ ಸಂಗಡಿಗರು ಪ್ರಾರ್ಥಿಸಿದರು. ಮಂಜು ಮಡಿವಾಳರ ಸ್ವಾಗತಿಸಿದರು. ಪ್ರದೀಪ ನಿರೂಪಿಸಿದರು. ಪ್ರಶಾಂತ ಭೋಸಲೆ ವಂದಿಸಿದರು.
ಸಾವಿತ್ರಿ ನಾಗೇಶ ಪಾಲೇಕರ ನಿಧನ
ಹುಬ್ಬಳ್ಳಿ: ಧಾರವಾಡ ನಗರದ ಗಾಂಧಿ ನಗರ ನಿವಾಸಿ ಸಾವಿತ್ರಿ ನಾಗೇಶ ಪಾಲೇಕರ (90) ಅವರು ಈಚೆಗೆ ನಿಧನರಾದರು. ದಿವಂಗತರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement