ವಿದ್ಯಾರ್ಥಿಗಳಿಂದ ಪುಸ್ತಕ ಸಂವಾದ ಕಾರ್ಯಕ್ರಮ
ಹುಬ್ಬಳ್ಳಿ: ಇಲ್ಲಿನ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ವಿದ್ಯಾರ್ಥಿಗಳಿಂದ ಪುಸ್ತಕ ಸಂವಾದ ಕಾರ್ಯಕ್ರಮ ಜರುಗಿತು.
ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಅರೋಪಗಳು ಕೇಳಿಬರುತ್ತಿರುವ ಮಧ್ಯೆ, ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ ಕಳೆದ ಒಂದು ವಾರದ ಅವಧಿಯಲ್ಲಿ ವಿದ್ಯಾರ್ಥಿಗಳು ತಾವು ಓದಿದ ಪುಸ್ತಕಗಳ ಕುರಿತು ಮಾತನಾಡಿದರು.
ಕುವೆಂಪು, ಸ್ವಾಮಿ ವಿವೇಕಾನಂದ, ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು, ಎ.ಆರ್. ಮಣಿಕಾಂತ ಅವರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಮತ್ತು 'ಅಪ್ಪ ಅಂದರೆ ಆಕಾಶ', ವಿಠಲ ವೆಂಕಟೇಶ ಕಾಮತ್ ಅವರ 'ಇಡ್ಲಿ, ಆರ್ಕೆಡ್, ಆತ್ಮಬಲ' ಮುಂತಾದ ಕೃತಿಕಾರರು ಬಳಸಿದ ಭಾಷೆಯ ಸೊಬಗು, ವಿಷಯಗಳ ಕುರಿತು ವಿಚಾರಪೂರ್ಣ ಅನಿಸಿಕೆ, ಅಭಿಪ್ರಾಯಗಳನ್ನ ವಿದ್ಯಾರ್ಥಿಗಳ್ನು ವ್ಯಕ್ತಪಡಿಸಿದರು. ಪುಸ್ತಕ ಸಂವಾದದಲ್ಲಿ ವೈಚಾರಿಕವಾಗಿ ಅನಿಸಿಕೆ ವ್ಯಕ್ತಪಡಿಸಿದ ಸವಿತಾ ಮಾಳವಾಡೆ, ಚನ್ನಬಸಪ್ಪ ಕುಬಸದ, ಅಶ್ವಿನಿ ನಂದಿಹಳ್ಳಿ, ರೋಹಿತ್ ಸೂಜಿ, ಮಧುಶ್ರೀ ಬೋರಗಲ್ ಅವರಿಗೆ ಪ್ರಶಸ್ತಿ ನೀಡಲಾಯಿತು.
ಪ್ರಭಾವಗಳ ಕುರಿತು ಮಾತು: ಶಿವ್‌ಖೇರ್ ಅವರ 'ಯು ಕ್ಯಾನ್ ವಿನ್', ಅಬ್ದುಲ್ ಕಲಾಂ ಅವರ 'ವಿಂಗ್ಸ್ ಆಫ್ ಫೈರ್'ನಲ್ಲಿ ಹಾಗೂ ಮೊದಲಾದ ಲೇಖಕರು ಹೇಳಿದ ಮಹತ್ವದ ನುಡಿಗಳನ್ನ್ನು ಹೇಳುತ್ತಲೆ ಪುಸ್ತಕಗಳು ತಮ್ಮ ಮೇಲೆ ಬೀರಿದ ಪ್ರಭಾವಗಳ ಕುರಿತು ವಿದ್ಯಾರ್ಥಿಗಳು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಜ್ಞಾನ ಹೆಚ್ಚಿಸಲು, ಪ್ರೇರಣೆ ನೀಡಲು, ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುವ ಸಾಮರ್ಥ್ಯ ಬೆಳೆಸಲು, ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು, ಜ್ಞಾಪಕ ಶಕ್ತ್ನಿ ಹೆಚ್ಚಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನ್ನು ಎದುರಿಸಲು, ಸ್ವಯಂ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಹಲವಾರು ಉದ್ದೇಶಗಳಿಂದ ಈ ಸ್ಪರ್ಧೆ ಆಯೋಜಸಲಾಗಿದೆ ಎಂದು ಗ್ರಂಥಪಾಲಕ ಸಿ.ವಿ. ಓಂಕಾರಿ ಹೇಳಿದರು.
ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ 'ಕಾಲ್ ಫಾರ್ ನೆಷೆನ್' ಗ್ರಂಥ, ಎರಡನೂರು ಐವತ್ತಕ್ಕೂ ಹೆಚ್ಚಿನ ಕಥೆ ಕಾದಂಬರಿ, ಆತ್ಮಚರಿತ್ರೆ, ಇಂಗ್ಲಿಷ್ ಗ್ರಾಮರ್, ಹಾಸ್ಯ, ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯಗಳ ವಿವರ ಮಾಹಿತಿವುಳ್ಳ ಉಪಯುಕ್ತ ಇ ಗ್ರಂಥಗಳ ಸಿಡಿ ವಿತರಿಸಲಾಯಿತು. ಮೃತ್ಯುಂಜಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸಿ.ಎಸ್. ಹಸಬಿ, ಪ್ರೊ.ಸಿ.ಎಸ್. ಪಾಟೀಲ, ಎಸ್.ಎಸ್. ಪಾಟೀಲ, ಪ್ರೊ. ಎಂ.ಆರ್. ಶೆಟ್ಟರ್ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆನಂದ ಮುಳಗುಂದ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪ್ರೊ.ಎಸ್.ಎ. ಗನಿ, ಸಿ.ವಿ. ಓಂಕಾರಿ ಸೇರಿದಂತೆ ಇನ್ನಿತರರು ಇದ್ದರು.