ಕಾರ್ಯಕಾರಣಿ ಸಭೆಗೆ ಆಹ್ವಾನ
ಧಾರವಾಡ: ರಾಜ್ಯ ಬಿ ವೃಂದ ಶಿಕ್ಷಣಾಧಿಕಾರಿಗಳ ಒಕ್ಕೂಟ ರಾಜ್ಯ ಘಟಕದಿಂದ 2013-14ನೇ ಸಾಲಿಗಾಗಿ ರಾಜ್ಯ ಮಟ್ಟದ ಪದಾಧಿಕಾರಿಗಳ ಕಾರ್ಯಕಾರಣಿ ಸಭೆಯನ್ನು ಅ. 27ರಂದು ಬೆಳಗ್ಗೆ 10ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಕರೆಯಲಾಗಿದೆ. ಸಮಿತಿಯ ಎಲ್ಲ ಸದಸ್ಯರು ಹಾಜರಾಗಬೇಕು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಂ. ಮುಂದಿನಮನಿ ತಿಳಿಸಿದ್ದಾರೆ.
ಜಿಲ್ಲೆಯ ಮಾನವ ಸಂಪನ್ಮೂಲ ಏಜೆನ್ಸಿಗಳಿಗೆ ಸೂಚನೆ
ಧಾರವಾಡ: ಜಿಲ್ಲೆಯ ಅಟಲ್ ಜನಸ್ನೇಹಿ ಹಾಗೂ ನಾಡ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು 20 ಡಾಟಾ ಎಂಟ್ರಿ ಆಪರೇಟರ್ಗಳನ್ನು ಗುತ್ತಿಗೆ ಆಧಾರದ ಮೇಲೆ ನಿಯೋಜಿಸಲು ಅಧೀಕೃತ ಮಾನವ ಸಂಪನ್ಮೂಲ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅ. 30ರೊಳಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಅಟಲ್ಜಿ ಜನಸ್ನೇಹಿ ಕೇಂದ್ರದ ವಿಭಾಗವನ್ನು ಸಂಪರ್ಕಿಸಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ದೊಡ್ಡಾಟ
ಧಾರವಾಡ: ಕಿತ್ತೂರು ಚನ್ನಮ್ಮ ವಿಜಯೋತ್ಸವದ ಅಂಗವಾಗಿ ವಿದ್ಯಾವರ್ಧಕ ಸಂಘವು ಅ. 25ರ ಸಂಜೆ 6ಕ್ಕೆ ಇಂಗಳಗಿಯ ಎಂ.ಎಸ್. ಮಾಳವಾಡ ರಚನೆಯ ವೀರರಾಣಿ ಕಿತ್ತೂರು ಚನ್ನಮ್ಮ ದೊಡ್ಡಾಟ ಪ್ರದರ್ಶನ ಹಮ್ಮಿಕೊಂಡಿದೆ. ಕನ್ನಡ ಪ್ರಾಧ್ಯಾಪಕ ಡಾ. ಶ್ರೀಶೈಲ ಹುದ್ದಾರ ಅತಿಥಿಯಾಗಿ ಆಗಮಿಸಲಿದ್ದು, ಕವಿವಿ ಜಾನಪದ ಅಧ್ಯಯನ ವಿಭಾಗಮುಖ್ಯಸ್ಥ ಡಾ.ವಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ