ಟಿಟಿ: ರಾಷ್ಟ್ರೀಯ ತಂಡಕ್ಕೆ ಆಯ್ಕೆ
ಧಾರವಾಡ: ಶಿಕ್ಷಣ ಇಲಾಖೆಯು ಕಳೆದ ಅ. 18, 19 ಮತ್ತು 20ರಂದು ಬನಹಟ್ಟಿಯಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ (14 ವರ್ಷ ವಯೋವುತಿ) ನಗರದ ಬಾಲ ಬಳಗ ಶಾಲೆಯ ಸೌರಭ ಸಬ್ನಿಸ್, ತೇಜಸ್ ಜೇವೂರ್, ರಕ್ಷಕ ಹಲಗತ್ತಿ ಅವರ ತಂಡವು ದ್ವಿತೀಯ ಸ್ಥಾನ ಪಡೆಯಿತು. ನಂತರ ನಡೆದ ಲೀಗ್ ಪಂದ್ಯದಲ್ಲಿ ಸೌರಭ ಸಬ್ನಿಸ್, ತೇಜಸ ಜೇವೂರ್ ಬೆಂಗಳೂರು ದಕ್ಷಿಣ ತಂಡದ ಆಟಗಾರರನ್ನು ಸೋಲಿಸಿ ರಾಷ್ಟ್ರೀಯ ತಂಡದಲ್ಲಿ ಉಚ್ಚ ಕ್ರಮಾಂಕದ ಆಟಗಾರರಾಗಿ ಹೊರ ಹೊಮ್ಮಿದರು. ಡಿಸೆಂಬರ್‌ನಲ್ಲಿ ಔರಂಗಾಬಾದ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.