ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: ನಾಳೆ ಬೇಂದ್ರೆ ಗ್ರಂಥ ಬಹುಮಾನ ವಿತರಣೆ

Lingaraj Badiger
Updated On : 25 Oct 2013, 10:48 am

ಧಾರವಾಡ: ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅ. 26ರ ಬೆಳಗ್ಗೆ ದ.ರಾ. ಬೇಂದ್ರೆ 33ನೇ ಪುಣ್ಯಸ್ಮರಣೆಯಂದು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಸವದತ್ತಿವಿಠ್ಠಲ ದಳವಾಯಿ ಅವರ ಬೋಧಿ ನೆರಳಿನ ದಾರಿ ಕವನ ಸಂಕಲನ, ರೋಣ ತಾಲೂಕು ರಾಜೂರಿನ ಟಿ.ಎಸ್. ಗೊರವರ ಅವರ ಕುದರಿ ಮಾಸ್ತರ ಕಥಾಸಂಕಲನ, ಅಂಕೋಲೆಯ ಯುವ ಲೇಖಕಿ ವೈಶಾಲಿ ಹೆಗಡೆ ಅವರ ಲಲಿತ ಪ್ರಬಂಧಗಳ ಸಂಕಲನ ಒದ್ದೆ ಹಿಮ... ಉಪ್ಪುಗಾಳಿ, ಬೆಳಗಾವಿ ಬಸವಣ್ಣೆಪ್ಪ ಕಂಬಾರ ಅವರ ಕಥಾ ಸಂಕಲನ ಆಟಿಕೆ ಕೃತಿಗಳಿಗೆ ಈ ಬಾರಿ ಬೇಂದ್ರೆ ಗ್ರಂಥ ಬಹುಮಾನ ಒದಗಿದ್ದು, ಈ ಕೃತಿಗಳ ಸಮೀಕ್ಷೆ ನಡೆಯಲಿದೆ. 2013-14ರ ಬೇಂದ್ರೆ ಫೆಲೋಶಿಪ್ ಪಡೆದ ಕವಿ ಲೇಖಕ ಆನಂದ ಝಂಜರವಾಡ ಬರೆದ ದೂರ್ವಾಂಕೂರ ಪುಸ್ತಕವನ್ನು ಡಾ.ಕೆ. ದೊಡ್ಡರಂಗೇಗೌಡ ಬಿಡುಗಡೆ ಮಾಡುವರು. ಸಂಜೆ 6ಕ್ಕೆ ಬೇಂದ್ರೆ ಪುಣ್ಯಸ್ಮರಣೆ ಸಮಾರಂಭದಲ್ಲಿ ಡಾ.ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸುವರು. ಬೇಂದ್ರೆ ಟ್ರಸ್ಟ್ ಸದಸ್ಯರಾದ ಡಾ.ಕೆ.ಎಸ್. ಶರ್ಮಾ, ಡಾ. ವಾಮನ ಬೇಂದ್ರೆ, ಡಾ. ವೀಣಾ ಶಾಂತೇಶ್ವರ, ಡಾ.ಕೆ.ಆರ್. ದುರ್ಗಾದಾಸ, ನರಸಿಂಹ ಪರಾಂಜಪೆ ಬಹುಮಾನಿತ ಲೇಖಕರಿಗೆ ಪ್ರಶಸ್ತಿ ವಿತರಿಸುವರು ಎಂದು ಸಂಚಾಲಕ ಶ್ರೀನಿವಾಸ ವಾಡಪ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement