ಆದಿ ಕಾಲದಿಂದ ಬಂದ ಆತ್ಮ ಬಲಿದಾನ
ಧಾರವಾಡ: ಆತ್ಮಬಲಿದಾನ ಆದಿಮಾನವನ ಕಾಲದಿಂದಲೂ ಬಂದಿರುವುದನ್ನು ಪುರಾಣ, ಇತಿಹಾಸ, ಧರ್ಮಶಾಸ್ತ್ರಗಳಲ್ಲಿ ಕಾಣುತ್ತೇವೆ. ಅಲ್ಲದೆ, ಭಾರತೀಯ ಸಂಸ್ಕೃತಿಯಲ್ಲಿ ಸ್ವರ್ಗದ ಕಲ್ಪನೆ ಸೃಷ್ಟಿ ಮಾಡಿದ್ದನ್ನು ಸಹ ಕಾಣಬಹುದು ಎಂದು ಕರ್ನಾಟಕ ವಿವಿ ಕನ್ನಡ ಪ್ರಾಧ್ಯಾಪಕ ಡಾ.ಜೆ.ಎಂ. ನಾಗಯ್ಯ ಹೇಳಿದರು. ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ನಡೆದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ದತ್ತಿ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತಿ-ಆತ್ಮಬಲಿದಾನ ಪರಂಪರೆ ವಿಷಯ ಕುರಿತ ಉಪನ್ಯಾಸದಲ್ಲಿ ಅವರು, ಮರಣದಲ್ಲಿ ಸಹಜ, ದುರ್ಮರಣ, ಅಪಮರಣ, ಮಹಾ ಮರಣವೆಂಬ ಹಾಗೂ 12ನೇ ಶತಮಾನದಲ್ಲಿನ ಧಾರ್ಮಿಕ ಮರಣ ಮತ್ತು ಬಲಿದಾನಗಳಲ್ಲಿ ಸಮಾಜ ಹಿತಕ್ಕಾಗಿ ಬಲಿದಾನ, ಒತ್ತಾಯದ ಬಲಿದಾನ, ಸ್ತ್ರೀ ಆತ್ಮಬಲಿದಾನ, ಹರಕೆಯ ಬಲಿದಾನ, ಸಹಗಮನ ಪದ್ಧತಿಗಳನ್ನು ಹಾಗೂ ಹಿಂದೂ, ಜೈನ್, ಶೈವ-ವೀರಶೈವ ಧರ್ಮಗಳಲ್ಲಿಯ ಪರಂಪರೆಗಳನ್ನು ಮತ್ತು ಆತ್ಮಬಲಿದಾನಗಳ ಕುರಿತು ಚಿತ್ರಸಹಿತ ಪ್ರಾಧ್ಯಾಪಕ ಡಾ. ನಾಗಯ್ಯ ವಿವರಿಸಿದರು. ಸಂಘ ಕಾರ್ಯಾಧ್ಯಕ್ಷ ಪ್ರೊ.ಬಿ.ವಿ. ಗುಂಜೆಟ್ಟಿ ಮಾತನಾಡಿದರು. ಡಾ.ಜಿ.ಎಂ. ಹೆಗಡೆ, ಜಿ.ಬಿ. ಹೊಂಬಳ, ವೀರಣ್ಣ ಒಡ್ಡೀನ, ಶಂಕರ ಕುಂಬಿ, ಸದಾನಂದ ಶಿವಳ್ಳಿ, ರಾಜೇಶ್ವರಿ ನಾಗಯ್ಯ, ಡಾ.ಪರಮಾನಂದ ಮಸ್ಕಿ, ಶಿವಾನಂದ ಭಾವಿಕಟ್ಟಿ ಇದ್ದರು.