ತಂಬಾಕು ದುಷ್ಪರಿಣಾಮ: ಉಪನ್ಯಾಸ
ಅಣ್ಣಿಗೇರಿ: ಸಮೀಪದ ಮಣಕವಾಡ ಗ್ರಾಮದಲ್ಲಿ ಸ್ಥಳೀಯ ಅಮೃತೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳು ಮತ್ತು ಶೌಚಾಲಯದ ಮಹತ್ವ ಕುರಿತು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆರ್.ಸಿ. ಗೋಡಕೆ ಹಾಗೂ ಆರೋಗ್ಯ ಮೇಲ್ವಿಚಾರಕ ಎಸ್.ಕೆ. ಪೂಜಾರ ವಿವರಿಸಿದರು. ಅಧ್ಯಕ್ಷತೆಯನ್ನು ವೀರಣ್ಣ ಚಾಕಲಬ್ಬಿ ವಹಿಸಿದ್ದರು. ನಂತರ ಗದುಗಿನ ಪುಟ್ಟರಾಜ ಗವಾಯಿಗಳ ಶಿಷ್ಯವೃಂದದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.