ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮರಳು ಸಮಸ್ಯೆ: ಪರಿಹಾರಕ್ಕೆ ಸ್ವಾಗತ

Rashmi Kasaragodu
Updated On : 27 Oct 2013, 12:59 pm

ಧಾರವಾಡ: ಕಳೆದ ಒಂದು ತಿಂಗಳಿನಿಂದ ಹುಬ್ಬಳ್ಳಿ-ಧಾರವಾಡ ಮಹಾನಗರಗಳಲ್ಲಿ ಮರಳಿನ ಸಮಸ್ಯೆಯಿಂದ ತೊಂದರೆಗೊಳಪಟ್ಟ ಕಟ್ಟಡ ಕಟ್ಟುವ ಮಾಲೀಕರು, ಗುತ್ತಿಗೆದಾರರು, ಎಂಜಿನಿಯರ್ಗಳು ಈಗ ನಿರಾಳರಾಗಿದ್ದಾರೆ. ಗದಗ ಜಿಲ್ಲಾಧಿಕಾರಿಗಳು ಏರ್ಪಡಿಸಿದ್ದ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಎಂಜಿನಿಯರ್ ಸಂಘಗಳ ಪದಾಧಿಕಾರಿಗಳು, ಅವಳಿ ನಗರದ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಭಾಗವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವುದು ಸ್ವಾಗತಾರ್ಹ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹುಬ್ಬಳ್ಳಿ ಎಂಜಿನಿಯರ್ಸ್ ಸಂಘದ ಅಧ್ಯಕ್ಷ ಸುರೇಶ ಕಿರೇಸೂರ, ಧಾರವಾಡ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ ಸಂಘದ ಅಧ್ಯಕ್ಷ ಶಿವಾಜಿರಾವ ರಾಣೋಜಿ ಹಾಗೂ ಸತೀಶ ನಾಯ್ಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಮರಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಿ ಕೈಗೊಂಡ ನಿರ್ಣಯಗಳು ಮರಳು ನೇರವಾಗಿ ಗ್ರಾಹಕರ ಬಾಗಿಲಿಗೆ ಬರುವಂತಾಗಿದೆ. ಮರಳನ್ನು ನಿರ್ದಿಷ್ಟವಾದ ಬಣ್ಣಗಳನ್ನು ಹಚ್ಚಿದ ಮತ್ತು ಜಿ.ಪಿ.ಎಸ್. ಅಳವಡಿಸಿ ಲಾರಿಗಳಿಂದ ಸರ್ಕಾರ ನಿಗದಿಪಡಿಸಿದ ದರದಲ್ಲಿ ತಮ್ಮ ಮರಳು ಅವಶ್ಯಕತೆಯ ಪತ್ರವನ್ನು ನೀಡಿ ಪಡೆಯಬಹುದಾಗಿದೆ. ಇದು ಒಳ್ಳೆಯ ವಿಧಾನ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಪದಾಧಿಕಾರಿಗಳ ಆಯ್ಕೆ
ಧಾರವಾಡ: ಧಾರವಾಡ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಮಹಾನಗರ ಜಿಲ್ಲಾ ವ್ಯಾಪ್ತಿಯ ಎಂಟು ವಾರ್ಡ್ಗಳ ಪದಾಧಿಕಾರಿಗಳ ಆಯ್ಕೆ ಅ. 27ರಂದು ಪಕ್ಷದ ಕಚೇರಿಯಲ್ಲಿ ಸಂಜೆ 5ಕ್ಕೆ ನಡೆಯಲಿದೆ. ಮಾಜಿ ಶಾಸಕಿ ಸೀಮಾ ಮಸೂತಿ, ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಗೋಡಬೋಲೆ, ರಂಗಾಬದಿ ಭಾಗವಹಿಸುತ್ತಾರೆ. ಕ್ಷೇತ್ರದ ಹೆಚ್ಚಿನ ಕಾರ್ಯಕರ್ತರು ಆಗಮಿಸಬೇಕೆಂದು ಪದಾಧಿಕಾರಿ ಬಸವರಾಜ ಬೆಣ್ಣಿ ತಿಳಿಸಿದ್ದಾರೆ.
ನಾಳೆ ಅರಿವು ಸಭೆ
ಧಾರವಾಡ: ವಿದ್ಯಾವರ್ಧಕ ಸಂಘದ ಡಾ. ಬಿ.ಎಂ. ಪಾಟೀಲ ಸಭಾಭವನದಲ್ಲಿ ಅ. 28ರಂದು ಸಂಜೆ 6ಕ್ಕೆ ಅಭ್ಯರ್ಥಿ ತಿರಸ್ಕರಿಸುವ ಹಕ್ಕು- ಅರಿವು ಸಭೆ ಏರ್ಪಡಿಸಲಾಗಿದೆ. ವಕೀಲ ಸಂಘದ ಅಧ್ಯಕ್ಷ ವಿ.ಡಿ. ಕಾಮರೆಡ್ಡಿ ಅಧ್ಯಕ್ಷತೆ ವಹಿಸುವರು. ಶಾಸಕ ಅರವಿಂದ ಬೆಲ್ಲದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಿ.ಎಂ. ಅಮರಣ್ಣನವರ, ಡಾ. ಎಸ್.ಎಸ್. ಪಾಟೀಲ, ಎಂ. ಸುದರ್ಶನರಾಜ, ರವೀಂದ್ರ ಆಕಳವಾಡಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ನಾಳೆ ಉಪನ್ಯಾಸ
ಧಾರವಾಡ: ಚನ್ನಪ್ಪ ಉತ್ತಂಗಿ ದತ್ತಿ ಅಂಗವಾಗಿ ವಿದ್ಯಾವರ್ಧಕ ಸಂಘದದಲ್ಲಿ ಅ. 28ರಂದು ಸಂಜೆ 6ಕ್ಕೆ ಕನ್ನಡಕ್ಕೆ ಕ್ರಿಶ್ಚಿಯನ್ ಮಿಷನರಿಗಳ ಕೊಡುಗೆ ವಿಷಯ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಗ್ರಂಥಾಲಯ ವಿಜ್ಞಾನಿ ಡಾ. ಎಸ್.ಆರ್. ಗುಂಜಾಳ ಅಧ್ಯಕ್ಷತೆ ವಹಿಸುವರು. ನಿವೃತ್ತ ಸಭಾಪಾಲಕ ರೆ. ದೇವದಾನ ಕೊನೆಸಾಗರ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement