ಸಾಸ್ವಿಹಳ್ಳಿ: ಎನ್ನೆಸ್ಸೆಸ್ ಶಿಬಿರ
ಅಣ್ಣಿಗೇರಿ: ಸಮೀಪದ ಸಾಸ್ವಿಹಳ್ಳಿ ಗ್ರಾಮದಲ್ಲಿ ಸ್ಥಳೀಯ ಎನ್.ಎಸ್. ಹೂಗಾರ ವಿಜ್ಞಾನ, ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ವಿಶೇಷ ಶಿಬಿರ ಜರುಗಿತು. ಶಿಬಿರದಲ್ಲಿ ಪ್ರೊ.ಬಿ.ಡಿ. ನಲವಡಿ ಶಿಶು ಅಭಿವೃದ್ಧಿ ಮತ್ತು ಮಹಿಳೆಯರ ಕುರಿತು ಮಾತನಾಡಿದರು. ಮಲ್ಲವ್ವ ಪಾಟೀಲ, ಯಲ್ಲವ್ವ ದೊಡ್ಡಮನಿ, ನೀಲವ್ವ ಗಾಣಗೇರ, ಶೈನಾಜ್ಬಿ ಗುಳಗುಂದಿ ಇದ್ದರು. ನಂತರ ಶಿಬಿರಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು. ಸಂತೋಷ್ ಹೂಗಾರ ಸ್ವಾಗತಿಸಿದರು. ಸತೀಶ ನಾಗರಡ್ಡಿ ನಿರೂಪಿಸಿದರು. ಶೈಲಾ ಇಂಗಳಗಿ ವಂದಿಸಿದರು.