ಆರೋಪಿಗಳ ಬಂಧನ
ಹುಬ್ಬಳ್ಳಿ: ಮಹಾನಗರ ಪಾಲಿಕೆ ಆವರಣದಲ್ಲಿ ವಾರ್ಡ್ ನಂ. 41ರ ಪಾಲಿಕೆ ಸದಸ್ಯ ಲಕ್ಷ್ಮಣ ಗಂಡಗಾಳೇಕರ್ ಮೇಲೆ ಹಲ್ಲೆ ಎಸಗಿದ್ದ ಮೂವರು ಆರೋಪಿಗಳನ್ನು ಉಪನಗರ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ.
ಮಹಾನಗರ ಪಾಲಿಕೆಗೆ ಕೆಲಸದ ನಿಮಿತ್ತ ಆಗಮಿಸಿದ್ದ ಲಕ್ಷ್ಮಣ ಗಂಡಗಾಳೇಕರ ಅವರು ತಮ್ಮ ಕೆಲಸ ಮುಗಿಸಿಕೊಡು ಕಾರು ಹತ್ತುತ್ತಿದ್ದ ವೇಳೆ ಮಹ್ಮದ್ ಅರೀಫ ಶೇಖ್, ಅರೀಫ್ ಜಾಗಿರದಾರ ಮತ್ತು ಅಯೂಬ್ಖಾನ್ ಪಠಾಣ್ ಎನ್ನುವವರು ಹಲ್ಲೆ ಮಾಡಿದ್ದರು. ಇನ್ನೊಬ್ಬ ಆರೋಪಿ ನೂರುಲ್ಲಾಖಾನ್ ಜಾಗಿರದಾರ್ ಪರಾರಿಯಾಗಿದ್ದಾನೆ. ಅರವಿಂದ ನಗರದ ವಿವೇಕಾನಂದ ಶಾಲೆಗೆ ಸೇರಿದ ಜಾಗವನ್ನು ಹಲ್ಲೆ ಎಸಗಿದ ಆರೋಪಿಗಳು ಖೊಟ್ಟಿ ದಾಖಲೆ ನಿರ್ಮಿಸಿ ಮಾರಾಟ ಮಾಡುವ ಯತ್ನಕ್ಕೆ ಪಾಲಿಕೆ ಸದಸ್ಯ ಲಕ್ಷ್ಮಣ ಗಂಡಗಾಳೇಕರ್ ಅವರು ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಾಲ್ವರು ಸೇರಿಕೊಂಡು ಹಲ್ಲೆ ಮಾಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.